Thursday, May 2, 2024
spot_imgspot_img
spot_imgspot_img

ಕುಂದಾಪುರ: ಆಕಸ್ಮಿಕ ಬೆಂಕಿ; ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಮೃತ್ಯು..!!

- Advertisement -G L Acharya panikkar
- Advertisement -

ಕುಂದಾಪುರ: ಬೆಂಕಿ ಆಕಸ್ಮಿಕದಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಮೊಂತಿ ಪಿರೇರಾ(76) ಎಂದು ಗುರುತಿಸಲಾಗಿದೆ.

ಅ.8ರಂದು ರಾತ್ರಿ ಮನೆಯಲ್ಲಿ ಕರೆಂಟ್ ಹೋದ ಕಾರಣ ಮೇಣದ ಬತ್ತಿ ಹಚ್ಚಿ ಟೇಬಲ್ ಮೇಲಿಟ್ಟು ಮೊಂತಿ ಪಿರೇರಾ ಊಟ ಮಾಡುತ್ತಿದ್ದರು. ಈ ವೇಳೆ ಮೇಣದ ಬತ್ತಿಯು ಆಕಸ್ಮಿಕ ವಾಗಿ ಮೈಮೇಲೆ ಬಿದ್ದು ಮೊಂತಿ ಪಿರೇರಾ ಧರಿಸಿದ ನೈಟಿಗೆ ಬೆಂಕಿ ತಗುಲಿ ಸುಟ್ಟ ಗಾಯವಾಗಿತ್ತು.

ಗಂಭೀರ ಸ್ಥಿತಿಯಲ್ಲಿದ್ದ ಇವರು, ಅ.22ರಂದು ನಸುಕಿನ ವೇಳೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾಯಾಗದೆ ಮೃತಪಟ್ಟರು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!