Wednesday, August 5, 2026
spot_imgspot_img
spot_imgspot_img

ಉಳ್ಳಾಲ: ಪ್ರವಾಸಕ್ಕೆ ಬಂದ ತಂಡಗಳ ನಡುವೆ ಹೊಡೆದಾಟ; ಸ್ಥಳೀಯರ ಮನೆಗೆ ನುಗ್ಗಿ ದಾಂಧಲೆ

- Advertisement -
- Advertisement -

ಉಳ್ಳಾಲ: ಪ್ರವಾಸಕ್ಕೆಂದು ಬೆಂಗಳೂರಿನಿಂದ ಬಂದ ತಂಡಗಳೆರಡು ಕುಡಿದ ಅಮಲಿನಲ್ಲಿ ಪರಸ್ಪರ ಹೊಡೆದಾಡಿಕೊಂಡು ಸ್ಥಳೀಯ ಮನೆಗೆ ನುಗ್ಗಿ ತೊಂದರೆ ನೀಡಿದ ಘಟನೆ ಉಚ್ಚಿಲ ಬಟ್ಟಪ್ಪಾಡಿಯ ಖಾಸಗಿ ಗೆಸ್ಟ್‌ ಹೌಸ್‌ನಲ್ಲಿ ನಡೆದಿದೆ.

ಗೆಸ್ಟ್‌ಹೌಸ್‌ನಲ್ಲಿ ತಡರಾತ್ರಿಯವರೆಗೂ ಪಾರ್ಟಿ ನಡೆಯುತ್ತಿತ್ತು. ಇದಕ್ಕಾಗಿ ಎರಡು ಬಸ್‌ಗಳಲ್ಲಿ ಬೆಂಗಳೂರಿನಿಂದ ಜನರು ಬಂದಿದ್ದರು. ಪಾರ್ಟಿ ನಡೆಸಿ ಕೊನೆಗೆ ಬಂದಿದ್ದ ಜನರು ಎರಡು ತಂಡಗಳಾಗಿ ಹೊಡೆದಾಡಿಕೊಂಡಿದ್ದಾರೆ. ಈ ಹೊಡೆದಾಟವು ಗೆಸ್ಟ್‌ಹೌಸ್‌ ಒಳಗಿನಿಂದ ಹೊರಭಾಗಕ್ಕೂ ಬಂದಿದ್ದು, ಈ ವೇಳೆ ಕುಡಿತದ ಅಮಲಿನಲ್ಲಿದ್ದವರು ಸ್ಥಳೀಯ ಮನೆಯೊಂದಕ್ಕೆ ನುಗ್ಗಿ ಮನೆಯವರಿಗೆ ತೊಂದರೆ ನೀಡಿದ್ದಾರೆ.

ಪಾರ್ಟಿ, ಕುಡಿತದ ಅಮಲಿನಲ್ಲಿದ್ದವರು ಮನೆಗೆ ನುಗ್ಗಿ ತೊಂದರೆ ನೀಡಿದ್ದನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು.

- Advertisement -

Related news

error: Content is protected !!