Wednesday, August 12, 2026
spot_imgspot_img
spot_imgspot_img

ಪುತ್ತೂರು: ಕಾಲೇಜಿನ ಬಳಿ ಗಾಂಜಾ ಮಾರಾಟಕ್ಕೆ ಯತ್ನ; ಕೇರಳ ಮೂಲದ ವಿದ್ಯಾರ್ಥಿ ವಶಕ್ಕೆ..!

- Advertisement -
- Advertisement -

ಪುತ್ತೂರು: ಕಾಲೇಜಿನ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯೊರ್ವನನ್ನು ಗಾಂಜಾ ಸಹಿತ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಪುತ್ತೂರಿನ ಖಾಸಗಿ ಕಾಲೇಜಿನ ಬಳಿ ನಡೆದಿದೆ.

ಅದೇ ಕಾಲೇಜು ವಿದ್ಯಾರ್ಥಿ ಕೇರಳ ಮೂಲದ ಕಾಟಕ್ಕಾಡು ನಿವಾಸಿ ಮೋಬಿನ್ ಜೋರ್ಜ್(20) ಬಂಧಿತ ಆರೋಪಿ.

ಖಾಸಗಿ ಕಾಲೇಜೊಂದರ ಬಳಿಯಿರುವ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಅದೇ ಕಾಲೇಜು ವಿದ್ಯಾರ್ಥಿಯೋರ್ವ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿರುವುದಾಗಿ ಪೊಲೀಸರಿಗೆ ದೊರೆತ ಮಾಹಿತಿ ಪ್ರಕಾರ ದಾಳಿ ನಡೆಸಿದ ಪೊಲೀಸರು ವಿದ್ಯಾರ್ಥಿ ಮೋಬಿನ್ ಜೋರ್ಜ್ ನನ್ನು ಬಂಧಿಸಿ, ಆತನಿಂದ ಗಾಂಜಾ ಸಹಿತ 10,050 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 64/2022 ಕಲಂ: 8(ಸಿ),20 (b) (ii)B NDPS ಆಕ್ಟ್ ಅನ್ವಯ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಪುತ್ತೂರು ಉಪ ವಿಭಾಗದ ಪೊಲೀಸ್ ಅಧೀಕ್ಷಕರಾದ ಗಾನ ಕುಮಾರ್ ನಿರ್ದೇಶನದಂತೆ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕರಾದ ಸುನಿಲ್ ಕುಮಾರ್ ಅವರ ಮಾರ್ಗದರ್ಶನದಂತೆ ರಾಜೇಶ್ ಕೆವಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸ್ಕರಿಯಾ ಉದಯಕುಮಾರ್ ಜಗದೀಶ್ ಬಸವರಾಜ್ ಕಿರಣ್ ಸಂತೋಷ್ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದಾರೆ.

- Advertisement -

Related news

error: Content is protected !!