Sunday, August 9, 2026
spot_imgspot_img
spot_imgspot_img

ವಿಟ್ಲ: ಲಯನ್ಸ್ ಕ್ಲಬ್ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಆಚರಣೆ; ನಿವೃತ್ತ ಸೈನಿಕರಿಗೆ ಸನ್ಮಾನ

- Advertisement -
- Advertisement -

ವಿಟ್ಲ: ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಪ್ರಯುಕ್ತ ಮಾಜಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ವಿಟ್ಲದ ಸಿಂಹಗಿರಿ ಲಯನ್ಸ್ ಸೇವಾ ಭವನದಲ್ಲಿ ನಡೆಯಿತು.

ನಿವೃತ್ತ ಸೈನಿಕರಾದ ನವೀನ್ ಕೊಡಂಗಾಯಿ,
ಬಾಲಕೃಷ್ಣ ಗೌಡ ಪೊನ್ನೆತ್ತಾಡಿ,
ಸಿಲ್ವೆಸ್ಟರ್ ಎಡ್ವಿನ್ ರೊಡ್ರಿಗಸ್ ನೆತ್ರೆಕೆರೆ,
ತೋಮಸ್ ಡೇನಿಸ್ ಲೋಬೊ ಸೇರಾಜೆ,
ಡೇವಿಡ್ ವೇಗಸ್ ಒಕ್ಕೆತ್ತೂರು ಅವರನ್ನು ಸನ್ಮಾನಿಸಲಾಯಿತು.

ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸುದೇಶ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಗವರ್ನರ್ ಡಾ.ಗೀತಾಪ್ರಕಾಶ್, ನಿಕಟಪೂರ್ವ ಅಧ್ಯಕ್ಷ ಮೋನಪ್ಪ ಗೌಡ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಜಲಜಾಕ್ಷಿ , ಕೋಶಾಧಿಕಾರಿ ರವಿಶಂಕರ್, ಲಿಯೋ ಅಧ್ಯಕ್ಷೆ ಯುಕ್ತಾ ಉಪಸ್ಥಿತರಿದ್ದರು.

ಖಲಂದರ್, ಸಂತೋಷ್ ಕುಮಾರ್ ಶೆಟ್ಟಿ, ಲಕ್ಷ್ಮಣ ಮಾಸ್ಟರ್, ಅರವಿಂದ ರೈ ಮೂರ್ಜೆಬೆಟ್ಟು, ದೇವಿಪ್ರಸಾದ್ ಶೆಟ್ಟಿ, ಲೂಯಿಸ್ ಮಂಸ್ಕರೇನಸ್, ರಜತ್ ಆಳ್ವ, ವಿವಿಧ ಜವಾಬ್ದಾರಿ ನಿರ್ವಹಿಸಿದರು.

- Advertisement -

Related news

error: Content is protected !!