- Advertisement -
- Advertisement -

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೊಸ ನಿಯಮ ಪೊಲೀಸ್ ಇಲಾಖೆ ಜಾರಿಗೆ ತರಲಿದೆ. ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರಿರಿಗೆ ಅವಕಾಶವಿಲ್ಲ ಎಡಿಜಿಪಿ ಅಲೋಕ್ ಕುಮಾರ್ ಮಂಗಳೂರಿನಲ್ಲಿ ತಿಳಿಸಿದ್ದಾರೆ.

ಹದಿನೆಂಟು ವರ್ಷದ ಕೆಳಗಿನ ಮಕ್ಕಳು, ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆ ಈ ನಿಯಮದಿಂದ ರಿಯಾಯಿತಿ ನೀಡಲಾಗಿದೆ. ಕೇವಲ ಪುರುಷ ಹಿಂಬದಿ ಸವಾರರಿಗೆ ಮಾತ್ರ ಈ ನಿಯಮ ಅನ್ವಯಿಸಲಿದೆ. ಮುಂದಿನ ಒಂದು ವಾರದ ಮಟ್ಟಿಗೆ ಜಿಲ್ಲೆಯಲ್ಲಿ ಈ ನಿಯಮವನ್ನು ಪಾಲನೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ಕೆಲವು ಬಾರಿ ಹಿಂಬದಿ ಸವಾರರು ಸಮಸ್ಯೆ ಉಂಟು ಮಾಡ್ತಾರೆ. ಬೇರೆ ರಾಜ್ಯದಲ್ಲೂ ಈ ನಿಯಮ ಜಾರಿಗೆ ತರಲಾಗಿತ್ತು. ಆಗ ಎಲ್ಲಾ ಪುರಷ ಹಿಂಬದಿ ಸವಾರರಿಗೆ ದ್ವಿಚಕ್ರ ವಾಹನದಲ್ಲಿ ಸಂಚರಿಸಲು ಅವಕಾಶ ನಿರಾಕರಿಸಲಾಗಿತ್ತು ಇಲ್ಲಿ ಮಹಿಳೆಯರು, ಹಿರಿಯ ನಾಗರಿಕರು,ಮಕ್ಕಳಿಗೆ ರಿಯಾಯಿತಿ ನೀಡಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

- ಡ್ರಗ್ಸ್ ವಿರುದ್ಧ ಪೊಲೀಸ್ ಕಟ್ಟೆಚ್ಚರ: ಕಾಲೇಜು ವಿದ್ಯಾರ್ಥಿಗಳಿಗೆ ದಿಢೀರ್ ಡ್ರಗ್ ಟೆಸ್ಟ್-159 ವಿದ್ಯಾರ್ಥಿಗಳ ಪೈಕಿ ಒಬ್ಬರಿಗೆ ಪಾಸಿಟಿವ್..!
- ಬಿ.ಸಿ.ರೋಡ್ ಬಸ್ ನಿಲ್ದಾಣದ ಯುವತಿ ಹತ್ಯೆ ಪ್ರಕರಣ: ಚಿಕಿತ್ಸೆ ಬಳಿಕ ಆರೋಪಿ ಪೊಲೀಸ್ ವಶಕ್ಕೆ, ಸ್ಥಳ ಮಹಜರು ನಡೆಸಿದ ತನಿಖಾಧಿಕಾರಿಗಳು
- ಎಸ್ಐಆರ್ ಅವಧಿ ವಿಸ್ತರಣೆ ಚುನಾವಣಾ ಆಯೋಗಕ್ಕೆ ಬಿಟ್ಟ ವಿಚಾರ: ಹೈಕೋರ್ಟ್
- ಯುಪಿ ಮಾಜಿ ಸಚಿವ, ಬಿಜೆಪಿ ಒಬಿಸಿ ನಾಯಕ 7ನೇ ಮಹಡಿಯಿಂದ ಬಿದ್ದು ಸಾವು
- ಪತ್ನಿಗೆ ನೇಣು ಹಾಕಿ ಅತ್ತೆ–ಮಾವನಿಗೆ ವಿಡಿಯೋ ಕಾಲ್ ಮಾಡಿ ತೋರಿಸಿದ ಸೈಕೋ ಪತಿ…!

- Advertisement -








