Wednesday, July 22, 2026
spot_imgspot_img
spot_imgspot_img

ವಿಟ್ಲ: ವಿ.ಹಿಂ.ಪ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಿಟ್ಲ ಇದರ 41ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಬಿಡುಗಡೆ ಸಮಾರಂಭ

- Advertisement -
- Advertisement -

ವಿಟ್ಲ: ವಿಶ್ವ ಹಿಂದೂ ಪರಿಷದ್ ಆಶ್ರಯದ
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಿಟ್ಲ 41 ನೆಯ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಬಿಡುಗಡೆ ಸಮಾರಂಭವು ಇಂದು ಸಂಜೆ 6:30ಕ್ಕೆ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು ಹಿರಿಯ ಕಾರ್ಯಕರ್ತರಾಗಿರುವಂತಹ ಶ್ರೀ ವಿಠಲಶೆಟ್ಟಿ ಇವರು ಆಮಂತ್ರಣ ಬಿಡುಗಡೆ ನೆರವೇರಿಸಿದರು.

ಈ ಸಂದರ್ಭ ಸಮಿತಿಯ ಗೌರವಾಧ್ಯಕ್ಷರಾಗಿರುವ ಶ್ರೀ ರಾಮದಾಸ್ ಶೆಣೈ ,ಅಧ್ಯಕ್ಷರಾಗಿರುವ ಗೋಪಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಹರೀಶ್ ಕೆ. ವಿಟ್ಲ , ಕೋಶಾಧಿಕಾರಿ ರೋಹಿತ್ ಕಟ್ಟೆ, ಉಪಾಧ್ಯಕ್ಷರು ಶ್ರೀ ಭಾಸ್ಕರ್ ರೈ , ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯ ದರ್ಶಿ ಶ್ರೀ ಗೋವರ್ಧನ , ಮೈತ್ರೇಯಿ ಗುರುಕುಲದ ಶ್ರೀ ಜಗನ್ನಾಥ ಕಾಸರಗೋಡು, ಕ್ರಷ್ಣಯ್ಯ ಅರಮನೆ ವಿಟ್ಲ ಹಾಗೂ ಸಮಿತಿಯ ವಿವಿಧ ಪದಾಧಿಕಾರಿಗಳು ,ಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದರು.

ಈ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಗಸ್ಟ್ 31 ರಿಂದ ಸೆಪ್ಟೆಂಬರ್ 2ರ ತನಕ ಮೂರು ದಿವಸಗಳ ಕಾಲ ವಿಟ್ಲ ದ ಶ್ರೀ ಅನಂತೇಶ್ವರ ದೇವಸ್ಥಾನದ ಅನಂತ ಸದನದಲ್ಲಿ ವಿಜೃಂಭಣೆಯಿಂದ ಜರಗಲಿರುವುದು.

ಗಣೇಶೋತ್ಸವದ ಎರಡನೆಯ ದಿವಸ ಶಕ್ತಿ ಗಣಪತಿ ಹವನ ವಿಶೇಷವಾಗಿ ನಡೆಯಲಿರುವುದು ಹಾಗೆಯೇ ಮೂರನೆಯ ದಿವಸ ಮಧ್ಯಾಹ್ನ ಮಹಾಪೂಜೆಯ ಬಳಿಕ ಅನ್ನ ಸಂತರ್ಪಣೆ .2.30 ಗಂಟೆಗೆ ಸರಿಯಾಗಿ ಮಹಾಗಣಪತಿಯ ಶೋಭಾ ಯಾತ್ರೆಯು ವಿಟ್ಟದ ಪ್ರಮುಖ ಬೀದಿ ಗಳಲ್ಲಿ ಸಂಚರಿಸಿ ಸಂಜೆ ಅನಂತೇಶ್ವರ ದೇವಸ್ಥಾನದ ಕೆರೆಯಲ್ಲಿ ಜಲಸ್ತಂಭನ ನಡೆಯಲಿರುವುದು .ಈ ಮೂರು ದಿವಸಗಳ ಕಾರ್ಯಕ್ರಮಕ್ಕೆ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ ಶ್ರೀ ಮಹಾಗಣಪತಿಯ ಕೃಪೆಗೆ ಪಾತ್ರರಾಗಬೇಕಾಗಿ ಸಮಿತಿಯ ಎಲ್ಲಾ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.

- Advertisement -

Related news

error: Content is protected !!