Saturday, June 20, 2026
spot_imgspot_img
spot_imgspot_img

ಬಂಟ್ವಾಳ: ಸುಳ್ಳಮಲೆ ತೀರ್ಥ ಸ್ನಾನಕ್ಕೆ ಪೂರ್ವಭಾವಿಯಾಗಿ ಬಿದಿರಿನ ಕೇರ್ಪು ( ಏಣಿ) ಇಡುವ ಕಾರ್ಯಕ್ರಮ;ಆ.27 ರಿಂದ 31ರವರೆಗೆ ಗುಹಾತೀರ್ಥ ಸ್ನಾನ

- Advertisement -
- Advertisement -

ಬಂಟ್ವಾಳ: ಸೋಣ ಅಮಾವಾಸ್ಯೆಯ ದಿನದಿಂದ ಬಾದ್ರಪದ ಶುಕ್ಲ ಚೌತಿ ಹಬ್ಬದ ದಿನದವರೆಗೆ ಸುಳ್ಳಮಲೆ ತೀರ್ಥ ಸ್ನಾನಕ್ಕೆ ಪೂರ್ವಭಾವಿಯಾಗಿ ಬಿದಿರಿನ ಕೇರ್ಪು ( ಏಣಿ) ಇಡುವ ಸಂಪ್ರದಾಯ ಆಗಸ್ಟ್ 27 ರಂದು ನಡೆಯಿತು. ಅನಾದಿ ಕಾಲದಿಂದ ನಡೆದು ಬಂದ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು.

ನಮ್ಮ ತುಳುನಾಡಿನಲ್ಲಿ ಅತ್ಯಂತ ಅಪರೂಪದ ವಿಶಿಷ್ಟ ತೀರ್ಥ ಕ್ಷೇತ್ರ ಎನಿಸಿದ ಐತಿಹಾಸಿಕ ಧಾರ್ಮಿಕ ಹಿನ್ನೆಲೆಯುಳ್ಳ ಸುಳ್ಳಮಲೆ ಗುಹಾ ತೀರ್ಥಕ್ಕೆ ಪ್ರಾರ್ಥನೆ ಸಲ್ಲಿಸಿ, ಕೇರ್ಪು ಇಟ್ಟು ಧಾರ್ಮಿಕ ವಿಧಿ-ವಿಧಾನವನ್ನು ನೆರವೇರಿಸಿ ಅರಸು ಗುಡ್ಡೆಚಾಮುಂಡಿ ಮತ್ತು ಪ್ರಧಾನಿ ಪಂಜುರ್ಲಿ ದೈವಗಳಿಗೆ ತಂಬಿಲ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಮಾಣಿಗುತ್ತು ಸಚಿನ್ ರೈ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಬಾಲಕೃಷ್ಣ ಆಳ್ವ ಕೊಡಾಜೆ ಮತ್ತು ಗ್ರಾಮಸ್ಥರು ಸೇರಿದಂತೆ ಊರ ಪರ ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.

ದಿನಾಂಕ 27-08-2022ನೇ ಶನಿವಾರದಿಂದ ದಿನಾಂಕ 31-08-2022ನೇ ಬುಧವಾರ ಬಾದ್ರಪದ ಚೌತಿವರೆಗೆ ಗುಹಾ ತೀರ್ಥ ಸ್ನಾನಕ್ಕೆ ಭಕ್ತಾದಿಗಳಿಗೆ ಮುಕ್ತ ಅವಕಾಶ ಇದೆ.

- Advertisement -

Related news

error: Content is protected !!