Saturday, June 20, 2026
spot_imgspot_img
spot_imgspot_img

ಪುತ್ತೂರು: ಏಕಾಏಕಿ ಹಿಮ್ಮುಖವಾಗಿ ಚಲಿಸಿದ ಬಸ್ಸು; ವಿದ್ಯಾರ್ಥಿಯ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಸೇಫ್..!

- Advertisement -
- Advertisement -

ಪುತ್ತೂರು: ನಿಲ್ಲಿಸಿದ್ದ ಬಸ್ಸು ಏಕಾಏಕಿ ಹಿಮ್ಮುಖವಾಗಿ ಚಲಿಸಿದಾಗ, ಚಾಲಕನ ಹಿಂದಿನ ಸೀಟ್‌ನಲ್ಲಿ ಕುಳಿತಿದ್ದ ವಿದ್ಯಾರ್ಥಿಯೋರ್ವ ಬಸ್ ಅನ್ನು ನಿಯಂತ್ರಿಸಿ, ಗಾಬರಿಗೊಂಡಿದ್ದ ಪ್ರಯಾಣಿಕರು ನಿರಾಳವಾಗುವಂತೆ ಮಾಡಿದರು. ಈ ಬಗ್ಗೆ ಸಾಮಾಜಿಕ ವಿದ್ಯಾರ್ಥಿ ಸಿಜಾನ್ ಹಸನ್ ಅವರಿಗೆ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ನಲ್ಲಿ ಅನೇಕ ಪ್ರಯಾಣಿಕರ ಜತೆಗೆ, ಸೇಂಟ್ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಸಿಜಾನ್ ಕುಳಿತಿದ್ದರು. ಇದ್ದಕ್ಕಿದ್ದಂತೆ ಬಸ್ ಹಿಮ್ಮುಖವಾಗಿ ಚಲಿಸಲಾರಂಭಿಸಿತು. ತಕ್ಷಣ ಚಾಲಕನ ಸೀಟಿಗೆ ಜಿಗಿದ ಸಿಜಾನ್ ಬ್ರೇಕ್ ಹಾಕಿ ಬಸ್ ಅನ್ನು ನಿಲ್ಲಿಸಿದರು.

ಅಷ್ಟರಲ್ಲಿ ಇನ್ನೊಂದು ಬಸ್‌ನ ಚಾಲಕ ಬಂದು ಹ್ಯಾಂಡ್ ಬ್ರೇಕ್ ಹಾಕಲು ಸಹಕರಿಸಿದರು. ಸಿಜಾನ್ ಸಾಹಸವನ್ನು ಸೇಂಟ್ ಫಿಲೋಮಿನಾ ಕಾಲೇಜಿನ ಪ್ರಮುಖರು ಪ್ರಶಂಸಿಸಿದ್ದಾರೆ

ಇನ್ನೊಂದು ಬಸ್‌ನ ಚಾಲಕ ಬಂದು ಹ್ಯಾಂಡ್ ಬ್ರೇಕ್ ಹಾಕಲು ಸಹಕರಿಸಿದರು. ಸಿಜಾನ್ ಸಾಹಸವನ್ನು ಸೇಂಟ್ ಫಿಲೋಮಿನಾ ಕಾಲೇಜಿನ ಪ್ರಮುಖರು ಪ್ರಶಂಸಿಸಿದ್ದಾರೆ.

astr
- Advertisement -

Related news

error: Content is protected !!