Friday, June 27, 2025
spot_imgspot_img
spot_imgspot_img

ಪುತ್ತೂರು: ಬಸ್ ನಲ್ಲಿ ಸರಕಾರಿ ಅಧಿಕಾರಿಯ ಪರ್ಸ್ ಎಗರಿಸಿದ ಮಹಿಳೆ ಪತ್ತೆ.!! ಸಿಸಿ ಕ್ಯಾಮೆರಾದಲ್ಲಿ ಬಯಲಾಗಿದ್ದ ಕೃತ್ಯ.?

- Advertisement -
- Advertisement -
astr

ಪುತ್ತೂರು: ಖಾಸಗಿ ಬಸ್ ನಲ್ಲಿ ಸಂಚರಿಸುತ್ತಿದ್ದ ಸರಕಾರಿ ಅಧಿಕಾರಿಯ ಪರ್ಸ್ ನ್ನು ಮಹಿಳೆ ಎಗರಿಸಿದ ದೃಶ್ಯ ಬಸ್ಸ್ ನಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿ ವೈರಲ್ ಆಗಿತ್ತು ಸದ್ಯ ಪರ್ಸ್ ಕದ್ದ ಮಹಿಳೆ ಪತ್ತೆಯಾಗಿದ್ದಾರೆ.

ಪರ್ಸ್ ಕಳೆದುಕೊಂಡ ಮಹಿಳೆ ಪುತ್ತೂರು ತಾಲೂಕು ಪಂಚಾಯತ್ ಕಚೇರಿಯ ಯೋಜನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸುಕನ್ಯಾ ಎಂಬವರು. ಪರ್ಸ್ ಕಳೆದುಕೊಂಡ ವಿಷಯ ತಿಳಿದ ಸುಕನ್ಯಾ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಿಸಿ ಕ್ಯಾಮೆರಾದ ದೃಶ್ಯ ಆಧರಿಸಿ ಪೊಲೀಸರು ಪರ್ಸ್ ಎಗರಿಸಿದ ಮಹಿಳೆಯನ್ನ ಮಂಗಳೂರಿನ ಮಡೀಲ್‌ನಲ್ಲಿ ಪತ್ತೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ವಿವರ::
ಪುತ್ತೂರು ತಾಲೂಕು ಪಂಚಾಯತ್ ಕಚೇರಿಯ ಯೋಜನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸುಕನ್ಯಾ ಪರ್ಸ್ ಕಳೆದುಕೊಂಡ ಸರಕಾರಿ ಅಧಿಕಾರಿ. ಸುಕನ್ಯಾ ಮಂಗಳೂರಿನಿಂದ ಪುತ್ತೂರಿಗೆ ಪ್ರತಿನಿತ್ಯ ಖಾಸಗಿ ಬಸ್ ನಲ್ಲಿ ಸಂಚರಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು. ಎಂದಿನಂತೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಕಲ್ಲಡ್ಕ ದಲ್ಲಿ ಬಸ್ ಗೆ ಹತ್ತಿದ ಮಹಿಳೆಯೋರ್ವರು ಸುಕನ್ಯಾ ಕುಳಿತಿದ್ದ ಸೀಟ್ನಲ್ಲಿ ಕುಳಿತಿದ್ದರು. ಸುಕನ್ಯಾ ಪುತ್ತೂರಿಗೆ ಬಸ್ ತಲುಪಿದ ಬಳಿಕ ಬಸ್ನಿಂದ ಇಳಿದು ಮೆಡಿಕಲ್ ಶಾಪಿಗೆ ತೆರಳಿ ಪರ್ಸ್ ಗೆ ತಡಕಾಡಿದ ಸಂದರ್ಭದಲ್ಲಿ ಪರ್ಸ್ ಇಲ್ಲದಿರುವುದು ಸುಕನ್ಯಾ ಗಮನಕ್ಕೆ ಬಂದಿದೆ. ತಕ್ಷಣವೇ ಸುಕನ್ಯ ತಾನು ಬಂದ ಬಸ್ಸಿಬ್ಬಂದಿಗೆ ಕರೆ ಮಾಡಿ ಪರ್ಸ್ ಕಳೆದುಕೊಂಡ ಬಗ್ಗೆ ಮಾಹಿತಿ ನೀಡಿದ್ದಾರೆ. ಬಸ್ ಸಿಬ್ಬಂದಿಗಳು ಬಸ್ ನಲ್ಲಿದ್ದ ಸಿಸಿ ಕ್ಯಾಮೆರಾವನ್ನು ಚೆಕ್ ಮಾಡಿದ ಸಂದರ್ಭ ಮಹಿಳೆಯು ಸುಕನ್ಯಾ ಅವರ ಬ್ಯಾಗ್ ನಿಂದ ಪರ್ಸನ್ನು ಕಲಿಯುತ್ತಿರುವುದು ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸುಕನ್ಯ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದದ್ದರು, ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಮಹಿಳೆಯನ್ನ ಮಂಗಳೂರಿನ ಮಡೀಲ್‌ನಲ್ಲಿ ಪತ್ತೆ ಹಚ್ಚಿದ್ದಾರೆ.

- Advertisement -

Related news

error: Content is protected !!