Monday, June 15, 2026
spot_imgspot_img
spot_imgspot_img

ಸುಳ್ಯ: ನಂಬರ್‌ ಪ್ಲೇಟ್‌ ಇಲ್ಲದ ದ್ವಿಚಕ್ರ ವಾಹನದಲ್ಲಿ ಇಬ್ಬರು ಅಪರಿಚಿತರ ತಿರುಗಾಟ; ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಪೊಲೀಸ್‌ ಠಾಣೆಗೆ ತಿಳಿಸಲು ಸೂಚನೆ

- Advertisement -
- Advertisement -

ಸುಳ್ಯ: ಸುಳ್ಯ ತಾಲೂಕಿನ ಮಂಡೆಕೋಲು ಎಂಬಲ್ಲಿ ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನದಲ್ಲಿ ಇಬ್ಬರು ಅನುಮಾನಾಸ್ಪದವಾಗಿ ತಿರುಗಾಡುತ್ತಿರುವ ಘಟನೆ ನಡೆದಿದೆ.

ಮಂಡೆಕೋಲು, ಮೂರೂರು, ಬಡ್ಡಡ್ಕ ಮತ್ತು ಕನ್ನಡಿ ತೋಡು ಚೆಕ್ ಪಾಯಿಂಟ್‌ಗಳಲ್ಲಿ ಕರ್ತವ್ಯ ನಿರತ ಸಿಬ್ಬಂದಿಗೆ ಇಬ್ಬರು ವ್ಯಕ್ತಿಗಳು ಸ್ಕೂಟರ್‌ನಲ್ಲಿ ಅಡ್ಡಾದಿಡ್ಡಿಯಾಗಿ ಸವಾರಿ ಮಾಡುವುದನ್ನು ಕಂಡಿದ್ದಾರೆ. ಎಲ್ಲಿಯಾದರೂ ಇವರು ಕಂಡು ಬಂದಲ್ಲಿ ವಶಕ್ಕೆ ತೆಗೆದುಕೊಳ್ಳುವಂತೆ ಸುಳ್ಯ ಪೊಲೀಸರು ತಿಳಿಸಿದ್ದು, ಹಲವೆಡೆ ಸಿಸಿಟಿವಿ ಕ್ಯಾಮೆರಾದಲ್ಲಿ ಇವರ ಚಲನವಲನ ಸೆರೆಯಾಗಿದೆ.

- Advertisement -

Related news

error: Content is protected !!