Sunday, September 13, 2026
spot_imgspot_img
spot_imgspot_img

ಪಡುಬಿದ್ರಿ: ನಾಪತ್ತೆಯಾಗಿದ್ದ ಗೃಹಿಣಿಯ ಶವ ಸಂಶಯಾಸ್ಪದವಾಗಿ ಬಾವಿಯಲ್ಲಿ ಪತ್ತೆ

- Advertisement -
- Advertisement -

ಪಡುಬಿದ್ರಿ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಗೃಹಿಣಿಯ ಶವ ಸಂಶಯಾಸ್ಪದವಾಗಿ ಪಣೀಯೂರಿನ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.

ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ರಕ್ಷಿತ(24) ಮನೆ ಪಕ್ಕದ ಪಾಳು ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಘಟಿಸಿದ್ದು, ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಎರಡು ವರ್ಷದ ಹಿಂದೆ ಪಣಿಯೂರು ನಾರಾಯಣ ಪೂಜಾರಿಯವರ ಮಗಳು ರಕ್ಷಿತ ಮತ್ತು ಸಂಜಯ ಆಚಾರಿ ಅವರೊಂದಿಗೆ ಪ್ರೇಮ ವಿವಾಹವಾಗಿದ್ದು, ಕೆಲ ಸಮಯದಿಂದ ಇವರ ಸಂಬಂಧದಲ್ಲಿ ಒಡಕು ಉಂಟಾಗಿದ್ದು, ಶನಿವಾರ ಸಂಜೆ ರಕ್ಷಿತಳ ಮೃತದೇಹ ಮನೆ ಪಕ್ಕದ ಪಾಳು ಬಾವಿಯಲ್ಲಿ ಪತ್ತೆಯಾಗಿದೆ.

ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲದ ಆಸ್ಪತ್ರೆಗೆ ರವಾನಿಸಿದ್ದಾರೆ.

ಮೃತದೇಹವನ್ನು ಬಾವಿಯಿಂದ ಹೊರತೆಗೆಯಲು ಯಶವಂತ ಶೆಟ್ಟಿ, ಸೂರಿ ಶೆಟ್ಟಿ ಸಹಕರಿಸಿದ್ದು, ಪಡುಬಿದ್ರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!