Saturday, June 28, 2025
spot_imgspot_img
spot_imgspot_img

ಪುತ್ತೂರು: ರೈ ಎಸ್ಟೇಟ್‌ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್‌ (ರಿ) ಜನಸೇವಾ ಕೇಂದ್ರ ಪುತ್ತೂರು ಇದರ ದಶಸಂಭ್ರಮ; ಫಲಾನುಭವಿಗಳ ಸಮಾವೇಶ ಮತ್ತು ವಸ್ತ್ರ ವಿತರಣೆ

- Advertisement -
- Advertisement -
astr

ಪುತ್ತೂರು: ರೈ ಎಸ್ಟೇಟ್‌ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್‌ (ರಿ) ಜನಸೇವಾ ಕೇಂದ್ರ ಪುತ್ತೂರು ಇದರ ದಶಸಂಭ್ರಮ ಟ್ರಸ್ಟ್‌ನ ಫಲಾನುಭವಿಗಳ ಸಮಾವೇಶ ಮತ್ತು ವಸ್ತ್ರ ವಿತರಣೆ ಕಾರ್ಯಕ್ರಮ ಇದೇ ಬರುವ ಅಕ್ಟೋಬರ್‍ ೨೬ ರಂದು ಕಿಲ್ಲೆ ಮೈದಾನದಲ್ಲಿ ಬೆಳಗ್ಗೆ 9 ಗಂಟೆಗೆ ನಡೆಯಲಿದೆ.

ಕಳೆದ ಹಲವಾರು ವರ್ಷಗಳಿಂದ ಜನಸೇವೆ ಮಾಡಿಕೊಂಡು ಬಂದಿರುವ ರೈ ಎಸ್ಟೇಟ್ ಮಾಲೀಕ ಅಶೋಕ್ ರೈ ಕೋಂಡಿಬಾಳ ಅವರು ಈ ಬಾರಿ ದೀಪಾವಳಿಯಂದು ೨೫ ಸಾವಿರಕ್ಕೂ ಅಧಿಕ ಮಂದಿ ಮಹಿಳೆಯರಿಗೆ, ಮಕ್ಕಳಿಗೆ, ಪುರುಷರಿಗೆ ವಸ್ತ್ರ ದಾನ ಮಾಡಲಿದ್ದಾರೆ.

ಮಧ್ಯಾಹ್ನ ಅನ್ನಸಂತರ್ಪಣೆ!
ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮಧ್ಯಾಹ್ನ ಅನ್ನದಾನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ವಿಟ್ಲ, ಪುತ್ತೂರು, ಉಪ್ಪಿನಂಗಡಿ ಹೀಗೆ ಹಲವು ಭಾಗಗಳಲ್ಲಿ ಪೂರ್ವಭಾವಿ ಸಭೆ ನಡೆಯಿತು. ಈ ದಶ ಸಂಭ್ರಮದ ಕಾರ್ಯಕ್ರಮ ವಿಟಿವಿಯಲ್ಲಿ ನೇರಪ್ರಸಾರ ಇರಲಿದೆ.

- Advertisement -

Related news

error: Content is protected !!