Friday, June 19, 2026
spot_imgspot_img
spot_imgspot_img

ಸುಳ್ಯ: ಓಮಿನಿ ಕಾರು ಢಿಕ್ಕಿ; ಪಾದಚಾರಿ ಮೃತ್ಯು

- Advertisement -
- Advertisement -

ಸುಳ್ಯ: ಪಾದಚಾರಿಗೆ ಓಮಿನಿ ಕಾರು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಅರಂತೋಡಿನಿಂದ ನಡೆದಿದೆ.

ಮೀನು ವ್ಯಾಪಾರಕ್ಕೆಂದು ಹೋಗುತ್ತಿದ್ದ ಓಮಿನಿ ಕಾರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಉಳುವಾರು ನಿವಾಸಿ ತೀರ್ಥರಾಮ ಎಂಬವರಿಗೆ ಢಿಕ್ಕಿ ಹೊಡೆದಿದೆ. ತಲೆಗೆ ಗಂಭೀರ ಗಾಯಗಳಾಗಿದ್ದ ಅವರನ್ನು ಕೂಡಲೇ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಕೆವಿಜಿ ಆಸ್ಪತ್ರೆಗೆ ಕರೆತಂದರಾದರೂ ಚಿಕಿತ್ಸೆ ಫಲಿಸದೇ ಮೃತಪಟಿರುತ್ತಾರೆ. ಅವರು ಪತ್ನಿ ಹಾಗು ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಈ ಬಗ್ಗೆ ಸುಳ್ಯ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Insta: glacharyajewellers
Fb: glacharya
- Advertisement -

Related news

error: Content is protected !!