Friday, June 5, 2026
spot_imgspot_img
spot_imgspot_img

ಉಪ್ಪಳ: ಶಾಲಾ ವಿಜ್ಞಾನ ಮೇಳ ಕಾರ್ಯಕ್ರಮ ವೇಳೆ ಚಪ್ಪರ ಕುಸಿತ; ಹಲವು ವಿದ್ಯಾರ್ಥಿ, ಶಿಕ್ಷಕರಿಗೆ ಗಾಯ

- Advertisement -
- Advertisement -
vtv vitla

ಕಾಸರಗೋಡು: ಶಾಲಾ ವಿಜ್ಞಾನ ಮೇಳ ಕಾರ್ಯಕ್ರಮ ನಡೆಯುತ್ತಿದ್ದಾಗ ಚಪ್ಪರ ಕುಸಿದು ಹಲವಾರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಇಂದು ಮಧ್ಯಾಹ್ನ ಉಪ್ಪಳ ಸಮೀಪದ ಬೇಕೂರು ಶಾಲೆಯಲ್ಲಿ ನಡೆದಿದೆ.

ಮೂರು ದಿನಗಳ ಕಾಲ ಉಪ್ಪಳ ಬೇಕೂರು ಸರಕಾರಿ ಹಯಾರ್ ಸೆಕೆಂಡರಿ ಶಾಲೆಯಲ್ಲಿ ಮಂಜೇಶ್ವರ ಉಪ ಜಿಲ್ಲಾ ಮಟ್ಟದ ಶಾಲಾ ವಿಜ್ಞಾನ ಮೇಳ ಆಯೋಜಿಸಲಾಗಿದ್ದು ಎರಡನೇ ದಿನವಾದ ಇಂದು ಈ ಅವಘಡ ನಡೆದಿದೆ.

ತಗಡು ಶೀಟ್‌‌ನ ಚಪ್ಪರ ದಿಢೀರನೆ ಕುಸಿದು ಬಿದ್ದಿದ್ದು, ಈ ಸಂದರ್ಭದಲ್ಲಿ 200 ಕ್ಕೂ ಅಧಿಕ ವಿದ್ಯಾರ್ಥಿಗಳು ಚಪ್ಪರ ದಡಿಯಲ್ಲಿ ಸಿಲುಕಿದ್ದರು ಎನ್ನಲಾಗಿದೆ.ಕುಸಿದು ಬಿದ್ದಿದ್ದ ಚಪ್ಪರದ ಅವಶೇಷಗಳಡಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಹೊರ ತೆಗೆದು ಆಸ್ಪತ್ರೆಗೆ ತಲಪಿಸಲಾಗಿದ್ದು, ದುರಂತದಲ್ಲಿ ಕೆಲ ಶಿಕ್ಷಕರು ಮತ್ತು ತೀರ್ಫುಗಾರರಿಗೂ ಗಾಯಗಳಾಗಿವೆ.

- Advertisement -

Related news

error: Content is protected !!