Sunday, June 7, 2026
spot_imgspot_img
spot_imgspot_img

ಕಡಬ: ಬೆಳ್ಳಂಬೆಳಿಗ್ಗೆ ಕಾರು-ಜೀಪು ನಡುವೆ ಭೀಕರ ಅಪಘಾತ; ಇಬ್ಬರಿಗೆ ಗಂಭೀರ ಗಾಯ

- Advertisement -
- Advertisement -

ಕಡಬ: ಬಿಳಿನೆಲೆ ಸಮೀಪ ಇಂದು ಬೆಳ್ಳಂಬೆಳಿಗ್ಗೆ ಕಾರು-ಜೀಪು ನಡುವೆ ಅಪಘಾತ ನಡೆದಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಸುಬ್ರಹ್ಮಣ್ಯ- ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಹ್ಯುಂಡೈ ಕಾರು ಮತ್ತು ಜೀಪು ಮುಖಾಮುಖಿ ಢಿಕ್ಕಿಯಾಗಿದೆ. ಸುಬ್ರಹ್ಮಣ್ಯದಿಂದ ಕಡಬ ಕಡೆಗೆ ಜೀಪು ಚಲಿಸುತಿತ್ತು. ಕಾರು ಸುಬ್ರಹಣ್ಯ ಕಡೆಗೆ ತೆರಳುತಿತ್ತು.

ಅಪಘಾತದಲ್ಲಿ ಇಬ್ಬರಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ .ಕಾರಿನ ಮುಂಭಾಗ ಹಾಗು ಚಾಲಕನ ಸೀಟಿನ ಪಾರ್ಶ್ವದಲ್ಲಿ ನುಜುಗುಜ್ಜಾಗಿದೆ. ನಿಖರ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.

- Advertisement -

Related news

error: Content is protected !!