Friday, June 26, 2026
spot_imgspot_img
spot_imgspot_img

ಸರ್ವೀಸ್ ವಿಳಂಬ ಮಾಡಿದ್ದಕ್ಕೆ ತನ್ನದೇ ಆಕ್ಟೀವಾ ಗಾಡಿಗೆ ಬೆಂಕಿ ಹಚ್ಚಿದ ಯುವಕ…!

- Advertisement -
- Advertisement -

ತನ್ನ ಆಕ್ಟೀವಾ ಗಾಡಿಗೆ ಸರ್ವೀಸ್ ವಿಳಂಬ ಮಾಡಿದ್ದಕ್ಕೆ ಸಿಟ್ಟುಗೊಂಡ ಯುವಕನೊಬ್ಬ ಶೋರೂಂ ಮುಂದೆಯೇ ಸ್ಕೂಟರ್‌ಗೆ ಬೆಂಕಿ ಹಚ್ಚಿದ ಘಟನೆ ಟಿಫ್ರಾದಲ್ಲಿ ನಡೆದಿದೆ.

ಟಿಫ್ರಾದಲ್ಲಿ ಹೋಂಡಾ ಕಂಪೆನಿಯ ಶೋರೂಂನಲ್ಲಿ ರಾಜೀವ್ ಗಾಂಧಿ ಚೌಕ್ ಬಳಿಯ ನಿವಾಸಿ ನಿತಿನ್ ಲಾಲ್ ಎಂಬಾತ ತನ್ನ ಆಕ್ಟೀವಾ ಗಾಡಿಯನ್ನು ಸರ್ವೀಸ್‌ಗಿಟ್ಟಿದ್ದ. ಆದರೆ ಹೇಳಿದ ಸಮಯಕ್ಕೆ ಶೋರೂಂನಲ್ಲಿ ಸರ್ವೀಸ್ ಮಾಡಿರಲಿಲ್ಲ. ಇದರಿಂದ ಸಿಟ್ಟುಗೊಂಡ ನಿತಿನ್‌ ಲಾಲ್ ಏಜೆನ್ಸಿಯ ಮುಂದೆ ಸ್ಕೂಟರ್‌ನ್ನು ನಿಲ್ಲಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ಯುವಕನ ಹುಚ್ಚಾಟದಿಂದ ಆತಂಕಗೊಂಡ ಸಿಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!