
ಪರಿಶಿಷ್ಟ ಜಾತಿಯ ಮೀಸಲಾತಿ ಶೇ.15ರಿಂದ ಶೇ. 17ಕ್ಕೇರಿಸಿ, ಪರಿಶಿಷ್ಟ ಪಂಗಡದ ಮೀಸಲಾತಿ ಶೇ. 3ರಿಂದ ಶೇ. 7ಕ್ಕೇರಿಸಿದ ಕೆಲವೇ ದಿನಗಳಲ್ಲಿ, 10 ಸೆಂಟ್ಸ್ ಭೂಪರಿವರ್ತನೆಯ ಆದೇಶ ಹೊರಡಿಸಿ, ಎರಡೂ ಸಮುದಾಯದ ಅತ್ಯಗತ್ಯ ಬೇಡಿಕೆಯೊಂದು ಈಡೇರಿದೆ. ಈ ಆದೇಶ ಆಗುವಲ್ಲಿ ನಿರಂತರ ಕ್ರೀಯಾಶೀಲರಾಗಿ ಕಾರ್ಯ ಪ್ರವೃತ್ತರಾದ ಬಸವರಾಜ್ ಬೊಮ್ಮಾಯಿ ಸರಕಾರದ ಎಲ್ಲಾ ಶಾಸಕರಿಗೆ, ಸಚಿವರಿಗೆ ಕೃತಜ್ಞತೆಗಳು.
ದೇಶದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿ ಹುದ್ದೆಯನ್ನು ಕೇಂದ್ರ ಸರಕಾರ ಈ ಹಿಂದೆ ಪರಿಶಿಷ್ಟ ಜಾತಿಗೆ ಸೇರಿದವರಾದ ರಾಮನಾಥ್ ಕೋವಿಂದ್ ರವರಿಗೆ ನೀಡಿ, ಈಗ ಪರಿಶಿಷ್ಟ ಪಂಗಡಕ್ಕೆ ಸೇರಿದ ದ್ರೌಪದಿ ಮುರ್ಮುರವರನ್ನು ಆಯ್ಕೆ ಮಾಡುವ ಮುಖೇನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ಪರನಿಂತಿದೆ. ದೇಶದ ಘನತೆಯನ್ನು ಹೆಚ್ಚಿಸಿದೆ.
ಹಾಗೇನೇ ಈಗಾಗಲೇ ಆದೇಶವಾಗಿರುವ ಯಶಸ್ವಿನಿ ಯೋಜನೆಯಲ್ಲಿ ಸದ್ರಿ ಸಮುದಾಯದವರಿಗೆ ನೋಂದಾವಣಿ ಶುಲ್ಕ ನೀಡದಿರುವುದು ಅಭಿನಂದನೀಯವಾಗಿದೆ. ಬಿಜೆಪಿ ಸರಕಾರ ದಲಿತರ ಬೇಡಿಕೆಗಳನ್ನು ಈಡೇರಿಸುತ್ತಾ ವಿರೋಧಿಗಳ ಬಾಯಿ ಮುಚ್ಚಿಸಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ಪರನಿಂತ ಕೇಂದ್ರದ ನರೇಂದ್ರ ಮೋದಿ ಸರಕಾರಕ್ಕೆ ಹಾಗೂ ರಾಜ್ಯದ ಬಸವರಾಜ್ ಬೊಮ್ಮಾಯಿ ಸರಕಾರಕ್ಕೆ ಜಯರಾಮ ನಾಯ್ಕ, ಕುಂಟ್ರಕಲ ಕರ್ನಾಟಕ ರಾಜ್ಯ ಬಿಜೆಪಿ ಎಸ್.ಟಿ. ಮೋರ್ಚಾ ದ.ಕ. ಜಿಲ್ಲಾ ಮಾಧ್ಯಮ ಸಂಚಾಲಕರು ಅಭಿನಂದನೆ ತಿಳಿಸಿದ್ದಾರೆ.









