
ಕುಂದಾಪುರ: ಹಸುವಿಗೆ ಬೈಕ್ ಡಿಕ್ಕಿ ಹೊಡೆದು ರಸ್ತೆಗೆ ಎಸೆಯಲ್ಪಟ್ಟು ಸವಾರರಿಬ್ಬರು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಕಾಳಾವರ ಗ್ರಾಮದ ರೈಲ್ವೇ ಸೇತುವೆ ಬಳಿ ನಡೆದಿದೆ.
ಮೃತ ಬೈಕ್ ಸವಾರನನ್ನು ಕನ್ಯಾನದ ಸಮೀಪ ಬೇಡಗುಡ್ಡೆ ನಿವಾಸಿ ಶಿವರಾಮ್ ಕುಲಾಲ್ (35) ಎಂದು ಗುರುತಿಸಲಾಗಿದೆ.

ಶಿವರಾಮ ಅವರು ಬೈಕಿನಲ್ಲಿ ಗುಡ್ಡೆಯಂಗಡಿಯ ಮಹೇಶ (35)ರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಸಾಲಿಗ್ರಾಮ ಕಡೆಯಿಂದ ಕೋಟೇಶ್ವರದಿಂದ ಬಿದ್ಕಲ್‌ಕಟ್ಟೆ ಕಡೆಗೆ ಬರುತ್ತಿದ್ದರು. ರಸ್ತೆಗೆ ಅಡ್ಡ ಬಂದ ದನಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ರಸ್ತೆಗೆ ಬಿದ್ದಿದ್ದರು. ಇಬ್ಬರಿಗೂ ಗಂಭೀರ ಗಾಯವಾಗಿದ್ದು, ಪ್ರಜ್ಞೆ ಹೋದವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಪರೀಕ್ಷಿಸಿ, ಮಹೇಶ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದರು.
ಗಂಭೀರ ಗಾಯಗೊಂಡ ಶಿವರಾಮರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು . ಆದರೆ ಅವರೂ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಕನ್ಯಾನ ಮೂಲದವರಾದ ಶಿವರಾಮ್ ಕುಲಾಲ್ ಪತ್ನಿ ಮನೆಯಾದ ಅಚ್ಲಾಡಿ ಮಧುವನ ಶಾಂತಿನಗರದಲ್ಲಿ ವಾಸವಿದ್ದರು. ಮೃತರು ಪತ್ನಿ , ಮಗು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
- ಮಾದಕ ವಸ್ತು ಬಳಕೆ ತಡೆಗೆ ಕ್ರಮ-ಮರುಪರೀಕ್ಷೆಯಲ್ಲಿ 50 ವಿದ್ಯಾರ್ಥಿಗಳ ಪೈಕಿ 38 ಮಂದಿ ನೆಗೆಟಿವ್150 ಕಾಲೇಜುಗಳ 8,310 ವಿದ್ಯಾರ್ಥಿಗಳ ಪರೀಕ್ಷೆ; ಆರಂಭಿಕ ಹಂತದಲ್ಲಿ 98 ಮಂದಿಗೆ ಪಾಸಿಟಿವ್
- ನಿದ್ರೆಯಲ್ಲಿದ್ದ ಪತ್ನಿ, ಮೂವರು ಮಕ್ಕಳ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಂದ ಪಾಪಿ ತಂದೆ!
- ಜೈಲಲ್ಲಿ ಪ್ರಜ್ವಲ್ ರೇವಣ್ಣ ಬಳಸಿದ್ದ ಮೊಬೈಲ್ನ ಸೀಕ್ರೆಟ್ ಬಯಲು – 7 ಜನರ ವಿರುದ್ಧ ಕೇಸ್ ದಾಖಲು
- ಅನ್ಯ ರಾಜ್ಯಕ್ಕೆ ಅಕ್ರಮವಾಗಿ ಅಕ್ಕಿ ಸಾಗಾಟ – ಲಕ್ಷಾಂತರ ಮೌಲ್ಯದ ಪಡಿತರ ಜಪ್ತಿ
- ಬಂಟ್ವಾಳ: ಲಾರಿಯಿಂದ ಮರದ ದಿಮ್ಮಿ ಜಾರಿ ಬಿದ್ದು ಕ್ಲೀನರ್ ಸಾವು








