Sunday, June 21, 2026
spot_imgspot_img
spot_imgspot_img

ಹಾವು ಕಡಿದು 2 ವರ್ಷದ ಮಗು ಸಾವು

- Advertisement -
- Advertisement -

ಉತ್ತರ ಕನ್ನಡ: ಉ.ಕ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿಯ ದಾಸನಕೊಪ್ಪ ವೃತ್ತದ ಬಳಿ ಹಾವು ಕಚ್ಚಿ ಪುಟ್ಟ ಮಗುವೊಂದು ಪ್ರಾಣ ಕಳೆದುಕೊಂಡಿದೆ. ಮನೆ ಹಿಂಬದಿಯಲ್ಲಿ ಆಟ ಆಡುತ್ತಿದ್ದ ತರಾನ್ ಮಹಮ್ಮದ್ ಸಾಬ್ (2) ಮೃತಪಟ್ಟ ಬಾಲಕ.

ಆಟವಾಡುತ್ತಿದ್ದ ಎರಡು ವರ್ಷದ ಮಗು ತಾಯಿ ಬಳಿ ಬಂದು ಏನೋ ಕಚ್ಚಿದೆ ನೋವಾಗಿದೆ ಎಂದು ಅಳುತ್ತಾ ಹೇಳಿದೆ. ಆದರೆ ಪೋಷಕರು ಮಾತ್ರ ಇದೇನೋ ಇರುವೆ ಕಚ್ಚಿರಬಹುದು ಎಂದು ನಿರ್ಲಕ್ಷ್ಯ ಮಾಡಿದ್ದಾರೆ.

ಸ್ವಲ್ಪ ಹೊತ್ತಿನಲ್ಲಿ ಮಗು ಅಸ್ವಸ್ಥಗೊಂಡಿದೆ. ಬಾಯಿಯಿಂದ ನೊರೆ ಬರಲು ಆರಂಭಿಸಿ ಅಲ್ಲೇ ಪ್ರಾಣ ಬಿಟ್ಟಿದೆ. ಕೂಡಲೇ ಆಸ್ಪತ್ರೆಗೆ ಸೇರಿಸಲು ಮುಂದಾದರು ಏನು ಪ್ರಯೋಜನವಾಗಿಲ್ಲ. ಅಷ್ಟರಲ್ಲೇ ಮಗುವಿನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಈ ಬಗ್ಗೆ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ಮಗುವಿನ ಕುಟುಂಬದ ಆಕ್ರಂದನ ಮುಗಿಲುಮುಟ್ಟಿತ್ತು.

- Advertisement -

Related news

error: Content is protected !!