- Advertisement -
- Advertisement -

ವಿಟ್ಲ: ಅಳಕೆಮಜಲು ಶ್ರೀ ಶಾರದಾಂಭ ಭಜನಾ ಮಂದಿರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗಡೆ ಅವರು ಒಂದೂವರೆ ಲಕ್ಷ ರೂಪಾಯಿ ಆರ್ಥಿಕ ಸಹಕಾರ ನೀಡಿದರು. ಯೋಜನಾಧಿಕಾರಿ ಚೆನ್ನಪ್ಪ ಗೌಡ. ಪಿ ಮೊತ್ತದ ಚೆಕ್ನ್ನು ಭಜನಾಮಂಡಳಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಭಜನಾಮಂಡಳಿಯ ಪದಾಧಿಕಾರಿಗಳಾದ ರಾಜಾರಾಮ ಶೆಟ್ಟಿ ಕೋಲ್ಪೆ ಗುತ್ತು. ಜಗದೀಶ್ ಪೂಜಾರಿ ಅಳಕೆಮಜಲು, ಕೃಷ್ಣಪ್ಪ ಕೆಮಣಾಜೆ, ತಿರುಮಲೇಶ್ವರ ಅಳಕೆಮಜಲು, ಪ್ರದೀಪ್ ಶೆಟ್ಟಿ ಅಳಕೆಮಜಲು, ಸುಗಂಧಿನಿ ಪೆಲತಿಂಜ, ಜಯಂತಿ ಶೆಟ್ಟಿ ಅಳಕೆಮಜಲು ಮೊದಲಾದವರು ಉಪಸ್ಥಿತರಿದ್ದರು.

- Advertisement -