Monday, June 15, 2026
spot_imgspot_img
spot_imgspot_img

ಸ್ಯಾಂಡಲ್‌ವುಡ್‌ಗೆ ಮತ್ತೆ ಎಂಟ್ರಿ ಕೊಟ್ಟ ಸನ್ನಿ ಲಿಯೋನ್..! – ಉಪ್ಪಿ ಸಿನೆಮಾದಲ್ಲಿ ಪ್ರಮುಖ ಪಾತ್ರ

- Advertisement -
- Advertisement -

ಕನ್ನಡ ಸಿನಿಮಾ ರಂಗದಲ್ಲಿ ಕೇವಲ ಹಾಡಿನ ಮೂಲಕ ಬಂದು ಹೋಗಿದ್ದ ಸನ್ನಿ ಲಿಯೋನ್ ಈಗ ಮತ್ತೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸುತ್ತಿರುವ ‘ಯುಐ’ ಸಿನಿಮಾಗೆ ಸದ್ದಿಲ್ಲದೇ ಎಂಟ್ರಿ ಕೊಟ್ಟಿದ್ದಾರೆ ಹಾಟ್ ತಾರೆ ಸನ್ನಿ ಲಿಯೋನ್. ಈ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರವೊಂದನ್ನು ಮಾಡಿದ್ದು, ಅವರ ಭಾಗದ ಶೂಟಿಂಗ್ ಕೂಡ ಮುಗಿದಿದೆ ಎನ್ನಲಾಗುತ್ತಿದೆ.

ಸನ್ನಿ ಲಿಯೋನ್ ಭಾಗದ ಶೂಟಿಂಗ್ ಬೆಂಗಳೂರಿನಲ್ಲಿ ನಡೆದಿದ್ದು, ಯುಐನಲ್ಲಿ ಪ್ರಮುಖ ಪಾತ್ರವನ್ನೇ ಅವರು ನಿರ್ವಹಿಸಿದ್ದಾರಂತೆ. ಈವರೆಗೂ ಕನ್ನಡ ಸಿನಿಮಾ ರಂಗದಲ್ಲಿ ಸನ್ನಿ ಕೇವಲ ಹಾಡಿನಲ್ಲಿ ಮಾತ್ರ ಬಂದು ಹೋಗಿದ್ದು, ಈ ಸಿನಿಮಾದಲ್ಲಿ ತುಂಬಾ ಹೊತ್ತು ಸ್ಕ್ರೀನ್ ಮೇಲೆ ಇರುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತಾಗಿ ಸಿನಿಮಾ ರಂಗ ಯಾವುದೇ ಮಾಹಿತಿ ನೀಡಿಲ್ಲ.

ಹಲವು ವರ್ಷಗಳ ನಂತರ ಉಪೇಂದ್ರ ಮತ್ತೆ ನಿರ್ದೇಶನ ಮಾಡುತ್ತಿದ್ದು, ಅಪರೂಪದ ಕಥೆಯೊಂದನ್ನು ಈ ಚಿತ್ರಕ್ಕಾಗಿ ಹೆಣೆದಿದ್ದಾರಂತೆ. ನೂರಕ್ಕೂ ಹೆಚ್ಚು ಕಲಾವಿದರು ಈ ಸಿನಿಮಾದಲ್ಲಿ ಇರುವುದು ಮತ್ತೊಂದು ವಿಶೇಷ. ಉಪೇಂದ್ರ ಪಾತ್ರ ಕೂಡ ಹೊಸ ರೀತಿಯಲ್ಲಿ ಇದ್ದು, ಹೆಸರಾಂತ ಅನೇಕ ಕಲಾವಿದರು ತಾರಾಗಣದಲ್ಲಿ ಇದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್, ಫಸ್ಟ್ ಲುಕ್ ಕೂಡ ರಿಲೀಸ್ ಆಗಿದ್ದು, ಸಾಕಷ್ಟು ಕುತೂಹಲ ಕೂಡ ಮೂಡಿದೆ.

ಸನ್ನಿ ಕನ್ನಡದಲ್ಲಿ ಹಲವಾರು ಹಾಡುಗಳಲ್ಲಿ ಕಾಣಿಸಿಕೊಂಡರೂ, ಜೋಗಿ ಪ್ರೇಮ್ ಸಿನಿಮಾದ ಶೇಷಮ್ಮ ಹಾಡಿನ ಮೂಲಕ ಫೇಮಸ್ ಆಗಿದ್ದರು. ಯುಐ ಬಂದ ನಂತರ ಈ ಚಿತ್ರದ ಮೂಲಕ ಮತ್ತಷ್ಟು ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಶೂಟಿಂಗ್ ಮುಗಿಸಿಕೊಂಡು, ಸನ್ನಿ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದ್ದಾರೆ.

- Advertisement -

Related news

error: Content is protected !!