- Advertisement -
- Advertisement -




ಕುಂಬಳೆ: ಒಂದೂವರೆ ವರ್ಷಗಳ ಹಿಂದೆ ೯ ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪೆರುವಾಡ್ ಕಡಪ್ಪರ ನಿವಾಸಿ ಇಬ್ರಾಹಿಂ ಯಾನೆ ಇಬು (36) ಎನ್ನಲಾಗಿದೆ.
ಈತ 2021 ಜೂನ್ ತಿಂಗಳಲ್ಲಿ ಒಂಭತ್ತರ ಹರೆಯದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ದೂರಲಾಗಿದೆ. ಶಾಲೆಯಲ್ಲಿ ಇತ್ತೀಚೆಗೆ ನಡೆಸಿದ ಕೌನ್ಸಿಲಿಂಗ್ ವೇಳೆ ಬಾಲಕ ಈ ವಿಷಯವನ್ನು ಅಧಿಕಾರಿಗಳಲ್ಲಿ ತಿಳಿಸಿದ್ದಾನೆ. ಅಧಿಕಾರಿಗಳು ಶಾಲಾ ಮುಖ್ಯೋಪಾಧ್ಯಾಯರಿಗೆ ತಿಳಿಸಿದ್ದು, ಅವರು ಚೈಲ್ಡ್‌ಲೈನ್‌ಗೆ ಮಾಹಿತಿ ನೀಡಿದ್ದಾರೆ.
ಇದರಂತೆ ಚೈಲ್ಡ್‌ಲೈನ್ ಅಧಿಕಾರಿಗಳು ನೀಡಿದ ದೂರಿನಂತ ಪೊಲೀಸರು ಆರೋಪಿ ವಿರುದ್ಧ ಪೋಕ್ಸ್ ಕೇಸು ದಾಖಲಿಸಿ ಆತನನ್ನು ಬಂಧಿಸಿದ್ದಾರೆ.

- ಕರ್ತವ್ಯದಲ್ಲಿದ್ದ ವೇಳೆ ರೈಫಲ್ನಿಂದ ಸಿಡಿದ ಗುಂಡು; ಮಹಿಳಾ ಕಾನ್ಸ್ಟೇಬಲ್ ಮೃತ್ಯು
- ವಿಟ್ಲದಲ್ಲಿ ಉಪ ಸ್ಪೀಕರ್ ಮಾಂಕಾಳ ವೈದ್ಯರಿಗೆ ಸ್ವಾಗತ
- ಪೊಲೀಸ್ ಸಿಬ್ಬಂದಿಯ ಆರೋಗ್ಯ ಸುಧಾರಣೆಗೆ ‘ಪ್ರಾಜೆಕ್ಟ್ ಖುಷಿ’ ಆರಂಭ
- ಪುತ್ತೂರು: ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ – ಆಟೋ ಚಾಲಕ ವಶಕ್ಕೆ
- ವಿಟ್ಲದ ಪ್ರತಿಷ್ಠಿತ ಮಳಿಗೆಗೆ ಕೆಲಸಕ್ಕೆ ಮಹಿಳಾ ಸಿಬ್ಬಂದಿ ಬೇಕಾಗಿದ್ದಾರೆ
- Advertisement -








