Saturday, June 28, 2025
spot_imgspot_img
spot_imgspot_img

ಜಪಾನ್ ನೂತನ ಪ್ರಧಾನಿಯಾಗಿ ಯೋಶಿದಿ ಸುಗಾ ನೇಮಕ

- Advertisement -
- Advertisement -

ಜಪಾನ್ ನೂತನ ಪ್ರಧಾನಿಯಾಗಿ ಯೋಶಿದಿ ಸುಗಾ ಅವರನ್ನು ನೇಮಕ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವ ನಾಯಕರು ಅವರಿಗೆ ಶುಭ ಹಾರೈಸಿದ್ದಾರೆ. ಪ್ರಧಾನಿ ಮೋದಿ ಜಪಾನಿ ಭಾಷೆಯಲ್ಲಿ ಟ್ವೀಟ್ ಮಾಡುವುದರ ಮೂಲಕ ಜಪಾನ್ ನೂತನ ಪ್ರಧಾನಿಗೆ ಶುಭ ಕೋರಿದ್ದಾರೆ.

ಭಾರತ ಮತ್ತು ಜಪಾನ್ ಮಧ್ಯೆ ರಕ್ಷಣಾ ಸಂಬಂಧ ಬಲಗೊಳ್ಳಲಿದೆ ಎಂಬ ಆಶಾವಾದವನ್ನು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆ.

ಜಪಾನ್ ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜನೆ ಮತ್ತು ಕೊರೋನಾ ಸೃಷ್ಟಿಸಿರುವ ಆರ್ಥಿಕ ಬಿಕ್ಕಟ್ಟು ನೂತನ ಪ್ರಧಾನಿ ಮುಂದಿರುವ ಪ್ರಮುಖ ಸವಾಲಾಗಿದೆ. ಇದರ ಜತೆಗೆ ಚೀನಾ ಜಪಾನ್ ಸಮುದ್ರ ತೀರದಲ್ಲಿ ಆಧಿಪತ್ಯ ಸ್ಥಾಪಿಸಲು ನಡೆಸುತ್ತಿರುವ ಯತ್ನವನ್ನು ಕೂಡ ಜಪಾನ್ ಎದುರಿಸಬೇಕಾಗಿದೆ.

- Advertisement -

Related news

error: Content is protected !!