Sunday, June 14, 2026
spot_imgspot_img
spot_imgspot_img

ಬಂಟ್ವಾಳ: ಪಡಿತರ ಅಕ್ಕಿ ಅಕ್ರಮ ದಾಸ್ತಾನು; ಬಂಟ್ವಾಳ ಉಪ ತಹಶೀಲ್ದಾರ್‌ ನೇತೃತ್ವದಲ್ಲಿ ರೈಡ್‌

- Advertisement -
- Advertisement -

ಬಂಟ್ವಾಳ: ಬರಿಮಾರುವಿನಲ್ಲಿ ಅಕ್ರಮವಾಗಿ ರೇಶನ್‌ ಅಕ್ಕಿ ದಾಸ್ತಾನುವಿರಿಸಿದ ಮಾಹಿತಿ ತಿಳಿದ ಅಧಿಕಾರಿಗಳು ದಾಳಿ ನಡೆಸಿ ದಾಸ್ತಾನು ಮಾಡಿದ್ದ 5 ಕ್ವಿಂಟಾಲ್ ರೇಷನ್ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬಂಟ್ವಾಳ ಉಪ ತಹಶೀಲ್ದಾರ್‌ ನವೀನ್‌ ಕುಮಾರ್‌ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಐದು ಕ್ವಿಂಟಾಲ್ ಅಕ್ರಮ ದಾಸ್ತಾನು ರೇಶನ್ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ ಈ ಬಗ್ಗೆ ನೋಟೀಸ್ ಜಾರಿಗೊಳಿಸಿ, ನ್ಯಾಯಬೆಲೆ ಅಂಗಡಿ ಪರವಾನಿಗೆ ರದ್ದು ಮಾಡಲಾಗುವುದು ಅಥವಾ ಹೆಚ್ಚಿನ ಕ್ರಮಕೈಗೊಳ್ಳಲಾಗುವುದು ಎಂದು ಉಪ ತಹಶೀಲ್ದಾರ್‌ರವರು ಮಾಹಿತಿ ನೀಡಿದ್ದಾರೆ.

ನ್ಯಾ‍ಯಬೆಲೆ ಅಂಗಡಿಯಲ್ಲಿ ಪಡಿತರರಿಗೆ ಕೊಡುವ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನುಮಾಡಿ ಹೆಚ್ಚು ಬೆಲೆಗೆ ಮಾರಾಟ ಮಾಡುವ ಜಾಲ ನಡೆಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ..

- Advertisement -

Related news

error: Content is protected !!