Tuesday, July 21, 2026
spot_imgspot_img
spot_imgspot_img

ಕಾಸರಗೋಡು: ಅಕ್ರಮವಾಗಿ ಪಾನ್ ಮಸಾಲ ಸಾಗಾಟ; ಚಾಲಕನ ಬಂಧನ

- Advertisement -
- Advertisement -

ಕಾಸರಗೋಡು: ಕಂಟೈನರ್ ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 31,800 ಪ್ಯಾಕೆಟ್ ನಿಷೇಧಿತ ಪಾನ್ ಮಸಾಲ ಉತ್ಪನ್ನಗಳನ್ನು ಮೇಲ್ಪರಂಬ ಠಾಣಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಚಾಲಕನನ್ನು ಬಂಧಿಸಿದ್ದಾರೆ.

ಕರ್ನಾಟಕ ವಿಜಯಪುರದ ಸಿದ್ದಲಿಂಗಪ್ಪ(39) ಬಂಧಿತ ಆರೋಪಿ. ಮಂಗಳೂರಿನಿಂದ ಕೊಚ್ಚಿಗೆ ತೆರಳುತ್ತಿದ್ದ ಪಾರ್ಸೆಲ್ ಸಾಗಾಟದ ಕಂಟೈನರ್ ಲಾರಿಯನ್ನು ರಾಷ್ಟ್ರೀಯ ಹೆದ್ದಾರಿಯ ಚಟ್ಟಂಚಾಲ್ ಎಂಬಲ್ಲಿ ತಪಾಸಣೆ ನಡೆಸಿದಾಗ ಪಾನ್ ಮಸಾಲ ಉತ್ಪನ್ನ ಪತ್ತೆಯಾಗಿದೆ.

ಮಂಗಳೂರಿನಿಂದ ಓರ್ವ ವ್ಯಕ್ತಿ ಕೋಜಿಕೋಡ್ ಗೆ ತಲುಪಿಸಲು ಪಾರ್ಸೆಲ್ ನೀಡಿದ್ದಾಗಿ ಹಾಗೂ ಸಾಗಾಟ ವೆಚ್ಚವಾಗಿ ಮೂರು ಸಾವಿರ ರೂ. ನೀಡಿದ್ದಾಗಿ ವಿಚಾರಣೆ ವೇಳೆ ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ.

- Advertisement -

Related news

error: Content is protected !!