Thursday, May 2, 2024
spot_imgspot_img
spot_imgspot_img

ಬೆಂಗಳೂರು : ಬೈಕ್ ಹಾಗೂ ಕ್ಯಾಂಟರ್​​ ನಡುವೆ ಡಿಕ್ಕಿ ; ಬೈಕ್ ಸವಾರರಿಬ್ಬರು ಮೃತ್ಯು

- Advertisement -G L Acharya panikkar
- Advertisement -

ಬೆಂಗಳೂರು: ಬೈಕ್ ಹಾಗೂ ಕ್ಯಾಂಟರ್​​ ನಡುವೆ ಡಿಕ್ಕಿ ಸಂಭವಿಸಿ ​ಇಬ್ಬರು ಬೈಕ್ ಸವಾರರು ಮೃತಪಟ್ಟ ಘಟನೆ ಬೆಂಗಳೂರಿನ ಅಂಜನಾನಗರ ಬಸ್​​ ನಿಲ್ದಾಣದ ಬಳಿ ನಡೆದಿದೆ. ರವಿ(22), ವಿಕಾಸ್(20) ಮೃತ ಬೈಕ್ ಸವಾರರು. ನಿನ್ನೆ ರಾತ್ರಿ 8 ಗಂಟೆಗೆ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಅಂಜನಾನಗರ ಬಸ್ ನಿಲ್ದಾಣ ಬಳಿ ಪಲ್ಸರ್ ಬೈಕ್​ನಲ್ಲಿ ಹೋಗುತ್ತಿದ್ದ ಯುವಕರು ಹಿಂಬದಿಯಿಂದ ಕ್ಯಾಂಟರ್​ಗೆ ಗುದ್ದಿದ್ದಾರೆ. ಡಿಕ್ಕಿಯ ರಭಸಕ್ಕೆ ಯುವಕರು ಕೆಳಗೆ ಬಿದ್ದಿದ್ದು ಯುವಕರ ಮೇಲೆ ಕ್ಯಾಂಟರ್​ ಹರಿದಿದೆ. ತಕ್ಷಣ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ರಕ್ತಸ್ರಾವವಾಗಿ ಯುವಕರು ಸಾವನ್ನಪ್ಪಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದ್ದು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!