Saturday, June 28, 2025
spot_imgspot_img
spot_imgspot_img

ಸುಳ್ಯ: ನವವಿವಾಹಿತೆ ನಾಪತ್ತೆ; ಪತಿಯಿಂದ ದೂರು ದಾಖಲು

- Advertisement -
- Advertisement -

ಸುಳ್ಯ: ನವ ವಿವಾಹಿತೆ ಮಹಿಳೆಯೋರ್ವರು ನಾಪತ್ತೆಯಾಗಿದ್ದು, ಆಕೆಯನ್ನು ಹುಡುಕಿಕೊಡುವಂತೆ ಸುಳ್ಯ ಪೊಲೀಸ್‌ ಠಾಣೆಗೆ ಪತಿ ದೂರು ನೀಡಿದ್ದಾರೆ.

ಮರ್ಕಂಜ ಗ್ರಾಮದ ರಾಜಶೇಖರ ಎಂಬವರ ಪತ್ನಿ ಕೀರ್ತಿ (26 ವರ್ಷ) ಜನವರಿ 21ರಂದು ಎಲಿಮಲೆ ಕ್ಲಿನಿಕ್‌ಗೆಂದು ಹೋದವರು ಮರಳಿ ಮನೆಗೆ ಬಾರದ ಕಾಣೆಯಾಗಿದ್ದಾರೆ. ಕಳೆದ ತಿಂಗಳು ಡಿ.26ರಂದು ವಿವಾಹ ನಡೆದಿತ್ತು. ಜನವರಿ 21ರಂದು ನನ್ನ ಆರೋಗ್ಯ ಸರಿ ಇಲ್ಲವೆಂದು ನನ್ನ ಪತ್ನಿ ನನ್ನ ಬಳಿ ಹೇಳಿದ್ದು ನಾನು ಆಕೆಯನ್ನು, ಆಸ್ಪತ್ರೆಗೆ ಹೋಗಲೆಂದು ಮನೆಯಿಂದ ನನ್ನ ಜೀಪಿನಲ್ಲಿ ಬೆಳಿಗ್ಗೆ 10 ಗಂಟೆಗೆ ಆಕೆಯನ್ನು ಕರೆದುಕೊಂಡು ಹೋಗಿದ್ದು, ಬಳಿಕ ಎಲಿಮಲೆಯ ಕ್ಲಿನಿಕ್‌ಗೆ ಹೋಗಲೆಂದು ಆಕೆಯನ್ನು ಬಸ್ಸಿನಲ್ಲಿ ಹತ್ತಿಸಿದ್ದು, 10.30 ಕ್ಕೆ ಅವಳ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ಮೂಬೈಲ್ ಸ್ವಿಚ್ ಆಫ್ ಆಗಿತ್ತು.

ಬಳಿಕ ನಾನು ಆಕೆಯ ತಾಯಿಯ ಮನೆಗೆ ಫೋನ್ ಮಾಡಿ ಕೇಳಿದಾಗ ಅಲ್ಲಿಗೂ ಕೂಡ ಆಕೆ ಬಂದಿರುವುದಿಲ್ಲ ಎಂಬ ವಿಷಯವನ್ನು ಅವರ ತಾಯಿ ತಿಳಿಸಿರುತ್ತಾರೆ. ನಮಗೆ ತಿಳಿದಿರುವ ಎಲ್ಲಾ ಕಡೆಗಳಲ್ಲಿ ಆಕೆಯ ಸಂಬಂಧಿಕರ ಮನೆಗಳಲ್ಲಿಯೂ ಕೂಡ ವಿಚಾರಿಸಿದಾಗ ಯಾವುದೇ ಮಾಹಿತಿ ಲಭಿಸಿಲ್ಲ ಎಂದು ಪತಿ ರಾಜಶೇಖರ ಸುಳ್ಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದರೆ.

ಆಕೆ ಕಾಣೆಯಾಗಿದ್ದ ಸಂದರ್ಭ ಹಸಿರು ಬಣ್ಣದ ಚೂಡಿದಾರ ಧರಿಸಿದ್ದು ಸುಮಾರು 5 ಅಡಿ 3 ಇಂಚು ಎತ್ತರವಿದ್ದು ಕನ್ನಡ, ಅರೆ ಗನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಮಾತನಾಡಬಲ್ಲವರಾಗಿದ್ದಾರೆ. ಇವರನ್ನು, ಕಂಡುಬಂದಲ್ಲಿ ಸುಳ್ಯ, ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತ ಸುಳ್ಯ ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!