Thursday, June 18, 2026
spot_imgspot_img
spot_imgspot_img

ಮಂಗಳೂರು ತಲುಪಿದ ಯೋಧನ ಪಾರ್ಥಿವ ಶರೀರ; ಜಿಲ್ಲಾಡಳಿತದಿಂದ ಸಕಲ ಗೌರವ

- Advertisement -
- Advertisement -

ಭೋಪಾಲ್: ಭಾರತ ಸರ್ಕಾರದ ಗೃಹ ಸಚಿವಾಲಯದಡಿ ಕಾರ್ಯ ನಿರ್ವಹಿಸುವ ಸಶಸ್ತ್ರ ಸೀಮಾ ಬಲ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಮಂಗಳೂರು ಮೂಲದ ಸೈನಿಕ ಮುರಳೀಧರ ಬಿಎಸ್‌ ಹೃದಯಾಘಾತದಿಂದ ಭೋಪಾಲ್‌ನಲ್ಲಿ ನಿಧನ ಹೊಂದಿದ್ದಾರೆ.

ಅವರ ಪಾರ್ಥಿವ ಶರೀರವೂ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಜಿಲ್ಲಾಧಿಕಾರಿ ಎಡಿಸಿ,ಎಸಿ ಮತ್ತು CISF ಅಧಿಕಾರಿಗಳು ಜಿಲ್ಲಾಡಳಿತ ಮತ್ತು ಸರ್ಕಾರದ ಪರವಾಗಿ ಮೃತ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದರು.

ಪಾರ್ಥಿವ ಶರೀರವನ್ನು ಎಜೆ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ನಾಳೆ ಬೆಳಿಗ್ಗೆ ಅಂತಿಮ ದರ್ಶನ ನಂತರ ಸರ್ಕಾರದ ಗೌರವದಂತೆ ಅಂತ್ಯಕ್ರಿಯೆ ನಡೆಯಲಿದೆ.

- Advertisement -

Related news

error: Content is protected !!