Thursday, August 27, 2026
spot_imgspot_img
spot_imgspot_img

ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ; ವರದಕ್ಷಿಣೆ ಕಿರುಕುಳ ಆರೋಪ

- Advertisement -
- Advertisement -

ಕಲಬುರಗಿ: ನಗರದ ತಾರಫೈಲ್ ಬಡವಾಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆಯಾಗಿದೆ.

ಸುಜಾತ (34) ಮೃತ ದುರ್ದೈವಿ.

ಭೀಮಣ್ಣ ಎಂಬುವವರನ್ನು ಪ್ರೀತಿಸಿದ್ದ ಸುಜಾತ ಎಂಟು ವರ್ಷಗಳ ಹಿಂದೆ ವಿವಾಹ ಆಗಿದ್ದರು. ಮದುವೆಯಾದ ಬಳಿಕ ಇಬ್ಬರ ಮಧ್ಯೆ ವರದಕ್ಷಿಣೆ ವಿಚಾರಕ್ಕೆ ಆಗಾಗ ಗಲಾಟೆ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ.

ಶನಿವಾರವೂ ಭೀಮಣ್ಣ ಮತ್ತು ಆತನ ಕುಟುಂಬಸ್ಥರು ವರದಕ್ಷಿಣೆ ವಿಚಾರಕ್ಕೆ ಗಲಾಟೆ ತೆಗೆದಿದ್ದು, ಬಳಿಕ ಸುಜಾತ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

- Advertisement -

Related news

error: Content is protected !!