Sunday, June 29, 2025
spot_imgspot_img
spot_imgspot_img

ಮಂಗಳೂರು-ನವದೆಹಲಿ ನಡುವೆ ವಿಮಾನ ಸೇವೆ ಆರಂಭ

- Advertisement -
- Advertisement -

ಮಂಗಳೂರು: ಮಂಗಳೂರು ಮತ್ತು ನವದೆಹಲಿ ನಡುವೆ ವಿಮಾನ ಸಂಚಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು ಮತ್ತೆ ಆರಂಭಗೊಂಡಿದೆ.

ಮಂಗಳೂರಿನಿಂದ , ನವದೆಹಲಿಗೆ  ಸ್ಪೈಸ್ ಜೆಟ್ ವಿಮಾನ ಸಂಚಾರ ನಡೆಯುತ್ತಿತ್ತು. ಆದರೆ ಕೊರೊನಾ ಲಾಕ್​​ಡೌನ್ ಬಳಿಕ ಸಂಚಾರ ಸ್ಥಗಿತವಾಗಿತ್ತು. ಅನ್​​ಲಾಕ್ ಬಳಿಕ ದೇಶಿಯ ವಿಮಾನ ಆರಂಭವಾದರೂ ಮಂಗಳೂರು ಮತ್ತು ನವದೆಹಲಿ ನಡುವೆ ವಿಮಾನ ಹಾರಾಟ ಆರಂಭವಾಗಿರಲಿಲ್ಲ. ಇಂದಿನಿಂದ ನವದೆಹಲಿ ಮತ್ತು ಮಂಗಳೂರು ನಡುವೆ ನೇರ ವಿಮಾನಯಾನವನ್ನು ಸ್ಪೈಸ್ ಜೆಟ್ ಮರು ಆರಂಭಿಸಿದೆ.

ನವದಿಲ್ಲಿಯಿಂದ ಬೆಳಗ್ಗೆ 10.10ಕ್ಕೆ ಹೊರಟು ಮಧ್ಯಾಹ್ನ 12.35ಕ್ಕೆ ಮಂಗಳೂರು ತಲುಪಲಿದೆ. ಮಧ್ಯಾಹ್ನ 1.10ಕ್ಕೆ ಮಂಗಳೂರಿನಿಂದ ಹೊರಟು 3.55ಕ್ಕೆ ನವದೆಹಲಿ ತಲುಪಲಿದೆ. ಈ ವಿಮಾನ ಮಂಗಳವಾರ ಮತ್ತು ಭಾನುವಾರ ಮಾತ್ರ ಕಾರ್ಯ ನಿರ್ವಹಿಸಲಿದೆ.

- Advertisement -

Related news

error: Content is protected !!