- Advertisement -
- Advertisement -
ಚುನಾವಣಾ ಆಯೋಗ ಇಂದು ಮಧ್ಯಾಹ್ನ 12.30ಕ್ಕೆ ದೆಹಲಿಯಲ್ಲಿ ಸುದ್ದಿಗೋಷ್ಟಿ ಹಮ್ಮಿಕೊಂಡಿದೆ. ಈ ವೇಳೆ ಬಿಹಾರ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆ ಮಾಡಲಿದೆ. ವಿಶ್ವದಾದ್ಯಂತ ಕೊರೊನಾ ಸಾಂಕ್ರಾಮಿಕ ಹರಡಿರೋ ನಡುವೆ ನಡೆಯುತ್ತಿರುವ ಮೊದಲ ಪ್ರಮುಖ ರಾಜ್ಯ ಚುನಾವಣೆ ಇದಾಗಿದೆ.
ಬಿಹಾರ ವಿಧಾನಸಭೆಗೆ ನವೆಂಬರ್ 29ರೊಳಗಾಗಿ 243 ಹೊಸ ಸದಸ್ಯರನ್ನ ಆಯ್ಕೆ ಮಾಡಬೇಕಿದೆ. ಕೊರೊನಾ ಮುನ್ನೆಚ್ಚರಿಕೆ ಕ್ರಮ ವಹಿಸಬೇಕಿರುವ ಕಾರಣ ಒಂದಕ್ಕಿಂತ ಹೆಚ್ಚಿನ ಹಂತಗಳಲ್ಲಿ ಚುನಾವಣೆ ನಡೆಯುವ ಸಂಭವವಿದೆ.
ಸಿಎಂ ನಿತೀಶ್ ಕುಮಾರ್ 4ನೇ ಅವಧಿಗೆ ಚುನಾವಣೆ ಎದುರಿಸಲಿದ್ದಾರೆ. ಜೈಲು ಸೇರಿರುವ ಲಾಲೂ ಪ್ರಸಾದ್ ಯಾದವ್ ನೇತೃತ್ವದ ಆರ್ಜೆಡಿ ಪಕ್ಷ ಹಾಗೂ ಕಾಂಗ್ರೆಸ್, ನಿತೀಶ್ ವಿರುದ್ಧ ಚುನಾವಣೆಯಲ್ಲಿ ಸೆಣೆಸಲಿವೆ.
- Advertisement -