Saturday, June 28, 2025
spot_imgspot_img
spot_imgspot_img

ವಿಟ್ಲ : ಜೇಸಿ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಭಾರತ್ ಸ್ಕೌಟ್ ಗೈಡ್ ವತಿಯಿಂದ ಬೇಸಿಗೆ ಶಿಬಿರ

- Advertisement -
- Advertisement -

ವಿಟ್ಲ: ಜೇಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಭಾರತ್ ಸ್ಕೌಟ್ ಗೈಡ್ ವತಿಯಿಂದ ದಿನಾಂಕ 5-4-2023ರಿಂದ ದಿನಾಂಕ 8-4-2023ರವರೆಗೆ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಶಿಬಿರದ ಉದ್ಘಾಟನೆಯನ್ನು ವಿಟ್ಲ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಸುದರ್ಶನ್ ಪಡಿಯಾರ್, ಸ್ಥಳೀಯ ಸಂಸ್ಥೆಯ ಜಿಲ್ಲಾ ಪ್ರತಿನಿಧಿ ನಾರಾಯಣ, ಜೇಸಿ ಸಂಸ್ಥೆಯ ಪ್ರಾಂಶುಪಾಲ ಜಯರಾಮ್ ರೈ, ಆಡಳಿತಧಿಕಾರಿ ರಾಧಾಕೃಷ್ಣ, ಉಪ ಪ್ರಾಂಶುಪಾಲೆ ಜ್ಯೋತಿ ಶೆಣೈ, ಹೇಮಲತಾ, ಗೈಡ್ ಶಿಕ್ಷಕಿ ಜಯಶ್ರೀ ನೆರವೇರಿಸಿದರು.

ಒಟ್ಟು 85 ಶಿಬಿರಾರ್ಥಿಗಳು ಭಾಗವಹಿಸಿದರು. ಗೈಡ್ ವಿದ್ಯಾರ್ಥಿನಿ ಮನೋಜ್ಞ ಸ್ವಾಗತಿಸಿ, ವಿದ್ಯಾರ್ಥಿ ಅಕ್ಷತಾ ಪೈ ವಂದಿಸಿದರು. ಗೈಡ್ ವಿದ್ಯಾರ್ಥಿನಿ ಸೃಜನ ಕಾರ್ಯಕ್ರಮದ ನಿರೂಪಿಸಿದರು. ಶಾಲಾ ಶಿಕ್ಷಕರು, ಬೋಧಕೇತರರು ಉಪಸ್ಥಿತರಿದ್ದರು.

- Advertisement -

Related news

error: Content is protected !!