Saturday, June 28, 2025
spot_imgspot_img
spot_imgspot_img

ಮಂಗಳೂರು : 7 ವರ್ಷದ ಮಗುವಿನೊಂದಿಗೆ ತಾಯಿ ನಾಪತ್ತೆ..!

- Advertisement -
- Advertisement -

ಮಂಗಳೂರು: ನಗರ ಹೊರವಲಯದ ಉಳ್ಳಾಲದಲ್ಲಿ ವಾಸವಾಗಿದ್ದ ಬಿಹಾರ ಮೂಲದ ಮಹಿಳೆ ತನ್ನ 7 ವರ್ಷದ ಮಗುವಿನೊಂದಿಗೆ ನಾಪತ್ತೆಯಾದ ಘಟನೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದವರನ್ನು ಪಿಂಕಿ ದೇವಿ (36 ವರ್ಷ) ಹಾಗೂ 7 ವರ್ಷದ ಆಕೆಯ ಮಗು ಎಂದು ಗುರುತಿಸಲಾಗಿದೆ. ಬಿಹಾರ ಮೂಲದ ರವೀಂದ್ರ ಶಾ ಎಂಬವರು ತನ್ನ ಪತ್ನಿ ಹಾಗೂ ಮಗುವಿನೊಂದಿಗೆ ಉಳ್ಳಾಲ ಹೊಯಿಗೆ ಮರಿಯ ಕ್ಲಬ್ ಬಳಿ ಬಾಡಿಗೆ ಮನೆಯಲ್ಲಿ
ವಾಸವಾಗಿದ್ದರು. ಏ.11 ರಂದು ರವೀಂದ್ರ ಕೆಲಸ ಮುಗಿಸಿ ಮನೆಗೆ ಹಿಂತಿರುಗಿದಾಗ ಪತ್ನಿ ಹಾಗೂ ಮಗ ಮನೆಯಲ್ಲಿ ನಾಪತ್ತೆಯಾಗಿದ್ದರು. ಪತ್ನಿಯ ಮೊಬೈಲ್ ಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಬಂದಿತ್ತು . ಅದೇ ದಿನ ಬಾಡಿಗೆ ಮನೆಯ ಪಕ್ಕದಲ್ಲಿ ವಾಸವಾಗಿರುವ ಬಿಹಾರ್‍ ರಾಜ್ಯದ ರಂಜನ್ ಕುಮಾರ್‍ ಎಂಬಾತನು ಕೂಡಾ ನಾಪತ್ತೆಯಾಗಿದ್ದರು.

ಆತನ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿದೆ. ಈ ಬಗ್ಗೆ ಸ್ವಂತ ಊರಿನಲ್ಲಿ ವಿಚಾರಿಸಿದಾಗ ಪತ್ನಿ ಮನೆಗೆ ಹೋಗಿರುವುದಿಲ್ಲ ಎಂದು ತಿಳಿದು ಬಂದಿದೆ. ನಾಪತ್ತೆಯಾದ ಪತ್ನಿ ಮತ್ತು ಮಗುವನ್ನು ಹುಡುಕಿ ಕೊಡುವಂತೆ ಉಳ್ಳಾ ಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.

- Advertisement -

Related news

error: Content is protected !!