Tuesday, April 30, 2024
spot_imgspot_img
spot_imgspot_img

ಪುಣಚ : (ಎ.21- 22) ಶ್ರೀ ಉರಿಮಹಾಕಾಳಿ ದೈವಸ್ಥಾನ ಮೂರಿಬೆಟ್ಟು ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ನಾಗ ಪ್ರತಿಷ್ಠೆ ಹಾಗೂ ಶ್ರೀ ದೈವಗಳ ನೃತ್ಯೋತ್ಸವ

- Advertisement -G L Acharya panikkar
- Advertisement -

ಶ್ರೀ ಉರಿಮಹಾಕಾಳಿ ದೈವಸ್ಥಾನ ಮೂರಿಬೆಟ್ಟು, ಪುಣಚ ತಾರೀಕು 21.04.2024ನೇ ಆದಿತ್ಯವಾರ ಮತ್ತು 22.04.2024ನೇ ಸೋಮವಾರದ ವರೆಗೆ ಶ್ರೀ ದೈವಗಳ ಪ್ರತಿಷ್ಠೆ. ನಾಗ ಪ್ರತಿಷ್ಠೆ ಹಾಗೂ ನರ್ತನಾದಿ ಉತ್ಸವ ಕಾರ್ಯಕ್ರಮಗಳು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಮತ್ತು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ವಿವಿಧ ವೈದಿಕ ವಿಧಿ ವಿಧಾನಗಳೊಂದಿಗೆ ಜರಗಲಿರುವುದು.

21.04.2024ನೆ ಆದಿತ್ಯವಾರ ಸಾಯಂಕಾಲ 5 ಗಂಟೆಗೆ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿ ಮತ್ತು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರ ಆಗಮನ, ಸಿಂಗಾರಿಮೇಳದೊಂದಿಗೆ ಪೂರ್ಣಕುಂಭ ಸ್ವಾಗತ (ಮಹಿಷಮರ್ಧಿನಿ ಸಿಂಗಾರಿ ಮೇಳ ಪುಣಚ) ನಡೆಲಿದೆ.

5.30 ರಿಂದ ಓಂಕಾರ ಭಜನಾ ವೃಂದ ಮುಳ್ಳೇರಿಯ ಪ್ರಜಿತ್ ಕಾಕುಂಜೆ ಮತ್ತು ಬಳಗದವರಿಂದ ಭಜನಾಮೃತ ಜರಗಳಿದೆ. ರಾತ್ರಿ 7 ಗಂಟೆಗೆ ಪುಣ್ಯಾಹವಾಚನ, ಸ್ಥಳಶುದ್ದಿ, ಪ್ರಾಸಾದ ಶುದ್ದಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ವಾಸ್ತು ಪುಣ್ಯಹಾಂತ ನಡೆಯಲಿದೆ. ನಂತರ ರಾತ್ರಿ 9 ಗಂಟೆಗೆ ಅನ್ನ ಸಂತರ್ಪಣೆ ಜರಗಳಿದೆ.

ತಾ. 22.04.2024ನೇ ಸೋಮವಾರ ಪೂರ್ವಾಹ್ನ 6 ಗಂಟೆಗೆ ಗಣಪತಿ ಹೋಮ ನಡೆಯಲಿದೆ. ಬೆಳಿಗ್ಗೆ ಗಂಟೆ 8.29ರಿಂದ 9.38ರ ತನಕ ವೃಷಭ ಲಗ್ನ ಶುಭಮುಹೂರ್ತದಲ್ಲಿ ಶ್ರೀ ದೈವಗಳ ಪ್ರತಿಷ್ಠೆ, ನಾಗ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ನಡೆಯಲಿದೆ. 11 ಗಂಟೆಗೆ ಹರಿಸೇವೆ ನಂತರ ಪ್ರಸಾದ ವಿತರಣೆ ಜರಗಳಿದೆ. ನಂತರ ಮಧ್ಯಾಹ್ನ 1 ಗಂಟೆಗೆ : ಅನ್ನ ಸಂತರ್ಪಣೆ ಜರಗಳಿದೆ. ಅಪರಾಹ್ನ 3 ಗಂಟೆಗೆ ಕುಟುಂಬದ ಮಹಿಳಾ ವೃಂದದವರಿಂದ ಭಜನೆ ನಡೆಯಲಿದೆ. 4.30 ಗಂಟೆಗೆ ಶ್ರೀ ವಿಷ್ಣುಮೂರ್ತಿ, ಧೂಮಾವತಿ ಭಜನಾ ಸಂಘ ವಿಷ್ಣುನಗರ, ಕಿನ್ನಿಂಗಾರು ಇವರಿಂದ ಭಜನಾಮೃತ ನಡೆಯಲಿದೆ. 7 ಗಂಟೆಗೆ ಕೊರತಿ ಹಾಗೂ ಪಾಷಾಣಮೂರ್ತಿ ದೈವದ ಕೋಲ ನಡೆಯಲಿದೆ.ನಂತರ ರಾತ್ರಿ 9 ಗಂಟೆಗೆ ಅನ್ನ ಸಂತರ್ಪಣೆ ಜರಗಳಿದೆ.

ರಾತ್ರಿ 10 ಗಂಟೆಗೆ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ “ದೇವರ ನಾಮಗಳು” ನಂತರ ಧರ್ಮದೈವ ಉರಿಮಹಾಕಾಳಿ ನೃತ್ಯೋತ್ಸವ ನಂತರ ರಕೇಶ್ವರಿ ದೈವದ ನೃತ್ಯೋತ್ಸವ ಸೂರ್ಯೋದಯದ ತನಕ ಜರಗಲಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!