Monday, April 29, 2024
spot_imgspot_img
spot_imgspot_img

ಸಿಮೆಂಟ್ ಜಿಂಕೆ ಉರುಳಿ ಬಿದ್ದು 6 ವರ್ಷದ ಮಗು ಸಾವು..!

- Advertisement -G L Acharya panikkar
- Advertisement -

ಆಟವಾಡಲೆಂದು ಸಿಮೆಂಟ್ ಜಿಂಕೆ ಮೇಲೆ ಏರಿ ಆ ಪ್ರತಿಮೆ ಮುರಿದು ಬಿದ್ದು 6 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ಮುದ್ದಿನಕೊಪ್ಪದಲ್ಲಿರುವ ಟ್ರೀ ಪಾರ್ಕ್ ನಲ್ಲಿ ನಡೆದಿದೆ.

ಮೃತಪಟ್ಟ ಬಾಲಕಿ ಶಿವಮೊಗ್ಗ ನಗರದ ಹರೀಶ್, ಲಕ್ಷ್ಮೀ ದಂಪತಿ ಪುತ್ರಿ ಸಮೀಕ್ಷಾ ಎಂದು ಗುರುತಿಸಲಾಗಿದೆ.

ಭಾನುವಾರ ರಜಾ ಹಿನ್ನೆಲೆ ಕುಟುಂಬಸ್ಥರು ಮಕ್ಕಳೊಂದಿಗೆ ಟೀ ಪಾರ್ಕ್‌ಗೆ ತೆರಳಿದ್ದರು. ಈ ವೇಳೆ ಸಿಮೆಂಟ್ ಜಿಂಕೆ ಮೇಲೆ ಮಗು ಕುಳಿತುಕೊಂಡ ವೇಳೆ ಭಾರ ತಾಳದೇ ಸಿಮೆಂಟ್ ಜಿಂಕೆ ಮುರಿದು ಬಿದ್ದಿದೆ. ಆಟವಾಡಲು ಪೋಷಕರೊಂದಿಗೆ ಮಗು ತೆರಳಿದ್ದು ಈ ವೇಳೆ ದುರ್ಘಟನೆ ನಡೆದಿದೆ. ಘಟನೆ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

- Advertisement -

Related news

error: Content is protected !!