Monday, April 29, 2024
spot_imgspot_img
spot_imgspot_img

ಜೀವನ ಪರ್ಯಂತ ಸಂಪಾದಿಸಿದ್ದ 200 ಕೋಟಿ ಆಸ್ತಿ ದಾನ ಮಾಡಿದ ಉದ್ಯಮಿ

- Advertisement -G L Acharya panikkar
- Advertisement -

ಗುಜರಾತ್​ನ ಉದ್ಯಮಿಯೊಬ್ಬರು ಹಾಗೂ ಅವರ ಪತ್ನಿ ತಮ್ಮ 200 ಕೋಟಿ ಆಸ್ತಿಯನ್ನು ತ್ಯಜಿಸಿ ಸನ್ಯಾಸಿಯಾಗಲು ನಿರ್ಧರಿಸಿದ್ದಾರೆ. ಸಬರ್ಕಾಂತ ಜಿಲ್ಲೆಯ ಹಿಮ್ಮತ್‌ನಗರದ ಭಾವೇಶ್ ಭಾಯಿ ಭಂಡಾರಿ ಹಾಗೂ ಪತ್ನಿ ತಮ್ಮ ಇಡೀ ಜೀವಮಾನದಲ್ಲಿ ಗಳಿಸಿದ 200 ಕೋಟಿಗೂ ಹೆಚ್ಚು ಆಸ್ತಿಯನ್ನ ದತ್ತಿ ಸಂಸ್ಥೆಗೆ ದಾನ ಮಾಡಿದ್ದಾರೆ. ಲೌಕಿಕ ಜೀವನ ತೊರೆದು ನಿವೃತ್ತಿಯಾಗಲು ನಿರ್ಧರಿಸಿದ್ದಾರೆ. . ಭಾವೇಶ್ ಭಂಡಾರಿ ಅವರು ಗುಜರಾತ್‌ನ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಅವರು ಆಗಾಗ್ಗೆ ಜೈನ ಸಮುದಾಯದ ಮುನಿಗಳನ್ನು ಭೇಟಿಯಾಗುತ್ತಿದ್ದರು. ಇದೀಗ ಲೌಕಿಕ ಜೀವನ ತ್ಯಜಿಸಿ ಸನ್ಯಾಸಿಯಾಗಲು ನಿರ್ಧರಿಸಿದ್ದಾರೆ.

ಭಾವೇಶ್ ಭಾಯಿ ಭಂಡಾರಿ ಭಂಡಾರಿ ಅವರು ಜೈನ ಸಮುದಾಯದ ಸನ್ಯಾಸಿಗಳು ಮತ್ತು ಗುರುಗಳನ್ನು ಆರಾಧಿಸುತ್ತಾರೆ. ಅವರ ಮಗ ಮತ್ತು ಮಗಳು ಎರಡು ವರ್ಷಗಳ ಹಿಂದೆ ಸನ್ಯಾಸ ತೆಗೆದುಕೊಂಡಿದ್ದಾರೆ. 2022 ರಲ್ಲಿ ಅವರ ದೀಕ್ಷಾ ನಂತರ, ಭಾವೇಶ್ ಭಾಯ್ ಮತ್ತು ಅವರ ಪತ್ನಿ ಈಗ ಲೌಕಿಕ ಜೀವನವನ್ನು ತ್ಯಜಿಸಲು ನಿರ್ಧರಿಸಿದ್ದಾರೆ.

ಭಾವೇಶ್ ಭಾಯ್ ಭಂಡಾರಿ ಅವರು ಸಬರಕಾಂತದ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಬಾಲ್ಯದಿಂದ ಯಾವುದೇ ಕಷ್ಟವನ್ನು ನೋಡದೇ ಬೆಳೆದಿದ್ದಾರೆ. ಅವರು ಕನ್ಸ್​ಟ್ರಕ್ಷನ್​ ವ್ಯವಹಾರವನ್ನು ಹೊಂದಿದ್ದು, ಅಹಮದಾಬಾದ್‌ನಲ್ಲೂ ತಮ್ಮ ಉದ್ಯಮವನ್ನು ವಿಸ್ತರಿಸಿದ್ದರು.

ಇದೀಗ ಭಾವೇಶ್, ಅವರ ಪತ್ನಿ ಜೈನ ಸಮುದಾಯಕ್ಕೆ ದೀಕ್ಷೆಯನ್ನು ತೆಗೆದುಕೊಂಡಿದ್ದಾರೆ. ಈಗ ದೀಕ್ಷೆ ತೆಗೆದುಕೊಂಡ ನಂತರ ಭಿಕ್ಷಾಟನೆಯಲ್ಲಿಯೇ ಜೀವನ ಕಳೆಯಲಿದ್ದಾರೆ. ಅಷ್ಟೇ ಅಲ್ಲ, ಫ್ಯಾನ್, ಎಸಿ, ಮೊಬೈಲ್ ಫೋನ್ ಇತ್ಯಾದಿ ಎಲ್ಲ ಸೌಕರ್ಯಗಳನ್ನೂ ತ್ಯಜಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಈಗ ಅವರು ಭಾರತದಾದ್ಯಂತ ಬರಿಗಾಲಿನಲ್ಲಿ ತಿರುಗಾಡಬೇಕಾಗುತ್ತದೆ. ಭಂಡಾರಿ ಅವರ ಪರಿಚಿತರಾದ ದಿಕುಲ್ ಗಾಂಧಿ ಅವರು ಪ್ರತಿಕ್ರಿಯಿಸಿದ್ದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಏಪ್ರಿಲ್ 22 ರಂದು ಜೈನ ದೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

- Advertisement -

Related news

error: Content is protected !!