Tuesday, July 23, 2024
spot_imgspot_img
spot_imgspot_img

ಮಾತಿನ ಭರದಲ್ಲಿ ಸಂಸದ ಕ್ಯಾಪ್ಟನ್‌ ಬ್ರಿಜೆಶ್‌ ಚೌಟರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾಂಗ್ರೇಸ್‌ ಕಾರ್ಯಕರ್ತ:

- Advertisement -G L Acharya panikkar
- Advertisement -

’ಇಂಚಿನ ಒಂಜಿ ಮಿಲಿಟ್ರಿದಾಯೆ ಕಲ್ವೆ ಬತ್ತ್‌ದ್‌ ನಮ್ಮಕ್‌ಲೆನ್‌ ಅವ್ಲಾ ಬಿರುವೆರೆನ್‌ ಸೋಪಾಯೆರ್‌ ಪಂಡಾ ಈ ಪೂಜಾರಿ ಜಾತಿದಕುಲು ಇತ್ತ್‌ದ್‌ ದಾದ ಪ್ರಯೋಜನ..”: ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ವೈರಲ್‌

ಲೋಕಸಭೆ ಚುನಾವಣೆಯಲ್ಲಿ ದ ಕ ಜಿಲ್ಲೆಯಲ್ಲಿ ಕಾಂಗ್ರೇಸ್‌ ಪಕ್ಷದ ಅಭ್ಯರ್ಥಿ ಪದ್ಮರಾಜ್‌ ಆರ್‍ ಪೂಜಾರಿ ಒಂದು ಲಕ್ಷ ಮತಗಳ ಅಂತರದಿಂದ ಸೋಲು ಅನುಭವಿಸಿದ್ದು, ಈ ಬಗ್ಗೆ ಕಾಂಗ್ರೇಸ್ ಕಾರ್ಯಕರ್ತನೊಬ್ಬ ಕಾಂಗ್ರೇಸ್‌ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್‌‌ರವರಿಗೆ ಕರೆ ಮಾಡಿ ಪದ್ಮರಾಜ್ ಪೂಜಾರಿ ಸೋಲಿಗೆ ನೀವೇ ನೇರ ಹೊಣೆ, ಜಿಲ್ಲಾಧ್ಯಕ್ಷರ ಹುದ್ದೆಗೆ ರಾಜಿನಾಮೆ ನೀಡಬೇಕೆಂಬ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ವೈರಲ್‌ ಆಡಿಯೋದಲ್ಲಿ ದ.ಕ ಜಿಲ್ಲಾ ಸಂಸದ ಕ್ಯಾಪ್ಟನ್‌ ಬ್ರಿಜೆಶ್‌ ಚೌಟ ಹಾಗೂ ಉಡುಪಿ ಚಿಕ್ಕಮಗಳೂರು ಸಂಸದ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಅವರ ಬಗ್ಗೆ ಅವಾಚ್ಯ ಶಬ್ದಗಳನ್ನು ಪ್ರಯೋಗಿಸಿದ್ದು, ನಿಂದಿಸಿದ್ದಾರೆ. ಈ ಬಗ್ಗೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರೆ ಮಾಡಿ ಮಾತನಾಡುತ್ತಿದ್ದ ವೇಳೆ ಜಿಲ್ಲಾಧ್ಯಕ್ಷರು ಈ ಹಿಂದೆ ಜನಾರ್ಧನ ಪೂಜಾರಿಯವರು ಐದು ಬಾರಿ ಸೋತಿಲ್ಲವೇ ಎಂದು ಪ್ರಶ್ನಿಸುತ್ತಿದ್ದ ವೇಳೆ ರೊಚ್ಚಿಗೆದ್ದ ಕಾಂಗ್ರೇಸ್‌ ಕಾರ್ಯಕರ್ತ ಈ ಸಲತ ಲೋಕಸಭೆತ ಟ್ರೆಂಡ್‌ ಡ್‌ ಇಂಚಿನ ಒಂಜಿ ಮಿಲಿಟ್ರಿದಾಯೆ ಕಲ್ವೆ ಬತ್ತ್‌ದ್‌ ನಮ್ಮಕ್‌ಲೆನ್‌ ಅವ್ಲಾ ಬಿರುವೆರೆನ್‌ ಸೋಪಾಯೆರ್‌ ಪಂಡಾ ಈ ಪೂಜಾರಿ ಜಾತಿದಕುಲು ಇತ್ತ್‌ದ್‌ ದಾದ ಪ್ರಯೋಜನ..? ಈರ್‌ಲಾ ಶ್ರೀನಿವಾಸ್‌ ಪೂಜಾರಿನ ಲೆಕ್ಕ ಪಾತೆರೊಡ್ಚಿ, ಶ್ರೀನಿವಾಸ್ ಪೂಜಾರಿಲಾ ಯೂಸ್‌ಲೆಸ್‌ ಎಂಪಿ, ಪೂಜಾರಿ ಜಾತಿಡ್‌ ವಿನ್ನಾದ್‌ಲಾ ಎಂಕ್ಲೆಗ್‌ ಪ್ರಯೋಜನ ಇಜ್ಜಿ.. ಆರ್‌ ಬಿಜೆಪಿ ಪಕ್ಷಡ್‌ ವಿನ್‌ ಆಂಡಲಾ ಆರ್‌ ಪೂಜಾರಿ ಜಾತಿ ಪಂಡ್‌ದ್‌ ಎಂಕ್‌ ಹೆಮ್ಮೆ ಇಜ್ಜಿ.. ಎಂದು ಸಂಸದರುಗಳ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಇದೀಗ ಈ ಬಗ್ಗೆ ಕಾಂಗ್ರೇಸ್ ಕಾರ್ಯಕರ್ತನ ವಿರುದ್ಧ ಬಿಜೆಪಿ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

Related news

error: Content is protected !!