Sunday, June 21, 2026
spot_imgspot_img
spot_imgspot_img

ಬಂಗಲೆಯೊಂದರಲ್ಲಿ ಭಾರತೀಯ ಮೂಲದ ಕುಟುಂಬದ ಮೃತದೇಹ ಪತ್ತೆ

- Advertisement -
- Advertisement -

ಭಾರತೀಯ ಮೂಲದ ಶ್ರೀಮಂತ ದಂಪತಿ ಮತ್ತು ಅವರ ಪುತ್ರಿ ಅಮೆರಿಕದ ಮ್ಯಾಸಚೂಸೆಟ್ಸ್ ರಾಜ್ಯದಲ್ಲಿ 5 ಮಿಲಿಯನ್ ಡಾಲರ್ ಮೌಲ್ಯದ ಐಷಾರಾಮಿ ಬಂಗಲೆಯಲ್ಲಿ ಶವವಾಗಿ ಪತ್ತೆಯಾಗಿರುವುದು ವರದಿಯಾಗಿದೆ.

ರಾಕೇಶ್ ಕಮಲ್ (57), ಅವರ ಪತ್ನಿ ಟೀನಾ (54) ಮತ್ತು ಅವರ ಮಗಳು ಅರಿಯಾನಾ (18) ಇವರ ಶವಗಳು ಗುರುವಾರ ಸಂಜೆ 7.30ರ ಸುಮಾರಿಗೆ ಅವರ ಡೋವರ್ ಬಂಗಲೆಯಲ್ಲಿ ಪತ್ತೆಯಾಗಿವೆ ಎಂದು ಹೇಳಲಾಗಿದೆ.

ಡೋವರ್ ಮ್ಯಾಸಚೂಸೆಟ್ಸ್‌ನ ರಾಜಧಾನಿ ಬೋಸ್ಟನ್ ಡೌನ್‌ಟೌನ್‌ನಿಂದ ಸುಮಾರು 32 ಕಿ.ಮೀ. ದೂರದಲ್ಲಿದೆ. ರೀನಾ ಮತ್ತು ರಾಕೇಶ್ ಕಮಲ್ ಈ ಹಿಂದೆ ಎಜುನೋವಾ ಎಂಬ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದರು. ಕೌಟುಂಬಿಕ ಹಿಂಸಾಚಾರದಿಂದಾಗಿ ಈ ಹತ್ಯೆ ನಡೆದಿರಬಹುದೇ ಎಂಬ ಶಂಕೆ ಮೂಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ರಾಕೇಶ್ ಕಮಲ್ ಶವದ ಬಳಿ ಬಂದೂಕು ಪತ್ತೆಯಾಗಿದೆ ಎಂದು ವರದಿಗಳು ಹೇಳಿವೆ.

ಕುಟುಂಬದ ಮೂವರು ಸದಸ್ಯರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ ಈ ಕೃತ್ಯ ಎಸಗಿದವರು ಯಾರು ಎನ್ನುವ ವಿವರ ಇನ್ನೂ ತಿಳಿದು ಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಘಟನೆ ಕೊಲೆ ಅಥವಾ ಆತ್ಮಹತ್ಯೆ ಎನ್ನುವುದು ವೈದ್ಯಕೀಯ ಪರೀಕ್ಷೆಯ ಬಳಿಕ ತಿಳಿದು ಬರಲಿದೆ. ಹತ್ಯೆಗಳ ಹಿಂದಿನ ಉದ್ದೇಶದ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Related news

error: Content is protected !!