Monday, May 6, 2024
spot_imgspot_img
spot_imgspot_img

ನಕಲಿ ಖಾತೆ ತೆರೆದು ತುಳುನಾಡಿನ ದೈವಾರಾಧನೆ ಬಗ್ಗೆ ಅಶ್ಲೀಲ ಪೋಸ್ಟ್; ಬೆಂಗಳೂರು ಮೂಲದ ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು

- Advertisement -G L Acharya panikkar
- Advertisement -
vtv vitla

ಮಂಗಳೂರು: ತುಳುನಾಡಿನ ಸಂಸ್ಕೃತಿ ಹಾಗೂ ಆಚರಣೆಯ ಭಾಗವಾಗಿರುವ ದೈವಾರಾಧನೆಯ ಬಗ್ಗೆ ಅಶ್ಲೀಲವಾಗಿ ಪೋಸ್ಟ್​ನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದ ವ್ಯಕ್ತಿಯನ್ನು ಬರೋಬ್ಬರಿ 7 ತಿಂಗಳುಗಳ ಬಳಿಕ ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಬೆಂಗಳೂರಿನ ಶಿವರಾಜ್​ ಹೆಚ್‌.ಕೆ(37) ಎಂದು ಗುರುತಿಸಲಾಗಿದೆ. ನಕಲಿ ಟ್ವಿಟರ್​ ಖಾತೆಯ ಮೂಲಕ ಮಹಿಳೆಯರ ಜೊತೆ ದೈವವು ಇರುವಂತಹ ಅಶ್ಲೀಲ ಪೋಸ್ಟ್​ ಶೇರ್​ ಮಾಡಿದ್ದ ಬೆಂಗಳೂರಿನ ಅಮೃತಹಳ್ಳಿ ನಿವಾಸಿ ಶಿವರಾಜ್​ ಎಂಬಾತ ಈ ಮೂಲಕ ಕನ್ನಡಿಗರು ಹಾಗೂ ತುಳುನಾಡಿನ ಜನತೆಯ ನಡುವೆ ಸಂಘರ್ಷ ನಡೆಸುವ ಹುನ್ನಾರ ನಡೆಸಿದ್ದ. ಈತನ ಪೋಸ್ಟ್​ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆಯೇ ತುಳುನಾಡು ದೈವಾರಾಧನೆ ಸಂರಕ್ಷಣಾ ಯುವ ವೇದಿಕೆ ಸಂಚಾಲಕ ಭರತ್​ ಬಲ್ಲಾಲ್​ ಎಂಬವರು ದೂರನ್ನು ದಾಖಲಿಸಿದ್ದರು.

ಈ ಸಂಬಂಧ ಮಂಗಳೂರು ಕ್ರೈಂ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೊಂದು ನಕಲಿ ಟ್ವಿಟರ್​ ಖಾತೆಯಾದ್ದರಿಂದ ಇದರ ಮೂಲ ಹುಡುಕಿ ಹೊರಟ ಪೊಲೀಸರು ಘಟನೆ ನಡೆದು ಏಳು ತಿಂಗಳುಗಳ ಬಳಿಕ ಆರೋಪಿ ಶಿವರಾಜ್​ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಆರೋಪಿಯನ್ನು ಮಂಗಳೂರು 7ನೇ ಜೆಎಂಎಫ್​ಸಿ ನ್ಯಾಯಾಲಯದ ಎದುರು ಹಾಜರು ಪಡಿಸಲಾಗಿದೆ.

- Advertisement -

Related news

error: Content is protected !!