Saturday, May 4, 2024
spot_imgspot_img
spot_imgspot_img

ಅಗ್ನಿ ಅವಘಡ; ಹೊತ್ತಿ ಉರಿದ ಖಾಸಗಿ ಕಂಪನಿಯ ಕಟ್ಟಡ..!

- Advertisement -G L Acharya panikkar
- Advertisement -

ಬೆಂಗಳೂರು: ಬೆಂಗಳೂರಿನ ಆರ್‌ಟಿ ನಗರದಲ್ಲಿರುವ ಮಿರಾಕಲ್‌ ಡ್ರೀಮ್ಸ್‌ ಕಟ್ಟಡದೊಳಗಿನ ನೆಲಮಹಡಿಯಲ್ಲಿದ್ದ ಜನರೇಟರ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ಮೂರು ಮಹಡಿಗೆ ಬೆಂಕಿ ಕೆನ್ನಾಲಿಗೆಗೆ ಕೆಳ ಮಹಡಿ ಹೊತ್ತಿ ಉರಿಯುತ್ತಿದ್ದು, ಸ್ಥಳಕ್ಕೆ ಅಗ್ನಿಶಾಮಕ ವಾಹನ ದೌಡಾಯಿಸಿದೆ.

ಕಟ್ಟಡದ ಮೇಲ್ಮಡಿಯಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಆರ್‌ಟಿ ನಗರ ಪೊಲೀಸರು ಕಟ್ಟಡದೊಳಗೆ ಸಿಲುಕಿದ್ದ ಏಳು ಮಂದಿಯನ್ನು ರಕ್ಷಿಸಿ ಹೊರಗೆ ಕರೆ ತಂದಿದ್ದಾರೆ. ಕಟ್ಟಡದ ಕಿಟಿಕಿ ಗಾಜು ಒಡೆದು, ಪಕ್ಕದ ಕಟ್ಟಡದಿಂದ ಏಣಿ ಸಹಾಯದಿಂದ ರಕ್ಷಿಸಲಾಗುತ್ತಿದೆ. ಕಟ್ಟಡದ ಮೇಲ್ಭಾಗದಲ್ಲಿ ಇನ್ನು 10ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಸುಮಾರು 60 ಮಂದಿ ಒಳಗಡೆ ಇದ್ರು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದು, ಸದ್ಯ ಯಾರಿಗೂ ಪ್ರಾಣಾಪಾಯವಿಲ್ಲ. ಲಕ್ಷಾಂತರ ಮೌಲ್ಯದ ಆಯುರ್ವೇದಿಕ್ ಮೆಡಿಸಿನ್ ಅಗ್ನಿಗೆ ಆಹುತಿಯಾಗಿದೆ. ಅಗ್ನಿ ಅನಾಹುತದ ಈ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

- Advertisement -

Related news

error: Content is protected !!