Friday, May 3, 2024
spot_imgspot_img
spot_imgspot_img

ಪರೀಕ್ಷಾ ಕೊಠಡಿಯಲ್ಲಿ ಹೃದಯಾಘಾತ; ವಿದ್ಯಾರ್ಥಿನಿ ಸಾವು…!

- Advertisement -G L Acharya panikkar
- Advertisement -

ಪರೀಕ್ಷಾ ಕೇಂದ್ರದಲ್ಲಿ 15 ವರ್ಷದ ವಿದ್ಯಾರ್ಥಿನಿ ಹೃದಯ ಸ್ತಂಭನದಿಂದ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಗುಜರಾತ್ ಅಮ್ರೇಲಿಯ ಶಾಂತಬಾ ಗಜೇರಾ ಶಾಲೆಯಲ್ಲಿ ನಡೆದಿದೆ.

ಮೃತ ಪಟ್ಟ ವಿದ್ಯಾರ್ಥಿನಿ ಸಾಕ್ಷಿ ರಾಜೋಸಾರ ಎಂದು ಗುರುತಿಸಲಾಗಿದೆ.

ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಶಾಲೆಗೆ ಬಂದಿದ್ದು, ಈ ವೇಳೆ ಕ್ಲಾಸ್‌ ರೂಮ್‌ ಪ್ರವೇಶಿಸುವಾಗ ಕೆಳಗೆ ಬಿದ್ದಿದ್ದಾಳೆ. ತರಗತಿಯಲ್ಲಿದ್ದ ಶಿಕ್ಷಕರು ಮತ್ತು ಸಹಪಾಠಿಗಳು ವಿದ್ಯಾರ್ಥಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರು ಬಾಲಕಿಯು ಹೃದಯ ಸ್ತಂಭನದಿಂದಲೇ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಾರೆ.

ಗುಜರಾತ್‌ನಲ್ಲಿ ಇತ್ತೀಚೆಗೆ ಗರ್ಬಾ ನೃತ್ಯದ ವೇಳೆ ಹಲವರು ಹೃದಯಾಘಾತಕ್ಕೆ ಒಳಗಾಗಿದ್ದರು. ಕೇವಲ 24 ಗಂಟೆಯಲ್ಲೇ 10 ಮಂದಿ ಸಾವನ್ನಪ್ಪಿದ್ದು ಬೆಚ್ಚಿ ಬೀಳುವಂತೆ ಮಾಡಿತ್ತು. ಈ ದುರಂತ ಮಾಸುವ ಮುನ್ನವೇ ಗುಜರಾತ್‌ನಲ್ಲಿ 15 ವರ್ಷದ ಬಾಲಕಿ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾಳೆ. ಗುಜರಾತ್‌ನಲ್ಲಿ ಹೃದಯಾಘಾತ, ಹೃದಯಸ್ತಂಭನದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಳವಾಗಿರೋದು ಆತಂಕಕ್ಕೆ ಕಾರಣವಾಗಿದೆ.

- Advertisement -

Related news

error: Content is protected !!