



ಟಿಪ್ಪರ್ ಹರಿದು ಕೇರಳ ಮೂಲದ ಮಗು ಸಹಿತ ದಂಪತಿ ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಹೊರ ವಲಯದ ಕೇರಳ ರಸ್ತೆಯಲ್ಲಿ ನಡೆದಿದೆ.
ಮೃತರನ್ನು ದಿನೇಶ, ಅಂಜು ಹಾಗೂ ಮಗ ಇಶಾನ್ ಕೃಷ್ಣ ಎಂದು ಗುರುತಿಸಲಾಗಿದೆ.
ಮೂವರು ಒಂದೇ ಬೈಕ್‌ನಲ್ಲಿ ಪಕ್ಕದ ಕೇರಳದಿಂದ ಗುಂಡ್ಲುಪೇಟೆ ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದರು. ಈ ವೇಳೆ ಕಲ್ಲು ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ ಲಾರಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಚಾಲಕ ಕುಡಿದ ಮತ್ತಿನಲ್ಲಿ ಟಿಪ್ಪರ್ ಚಾಲನೆ ಮಾಡಿದ್ದು, ಆತನ ಅಜಾಗರೂಕತೆಯಿಂದ ಬೈಕ್‌ಗೆ ಢಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಬೈಕ್ ಸವಾರನ ಮೇಲೆ ಲಾರಿ ಹರಿದ ಪರಿಣಾಮ ದೇಹ ರಸ್ತೆಯಲ್ಲೇ ಛಿದ್ರ ಛಿದ್ರವಾಗಿದೆ. ಟಿಪ್ಪರ್ ಕೆಳಗೆ ಸಿಲುಕಿದ ಇನ್ನಿಬ್ಬರನ್ನು ಬೈಕ್ ಸಮೇತ ಸುಮಾರು 300 ಮೀಟರ್ ನಷ್ಟು ಲಾರಿ ಎಳೆದುಕೊಂಡು ಹೋಗಿದ್ದು, ಘಟನಾ ಸ್ಥಳಕ್ಕೆ ಚಾಮರಾಜನಗರ ಜಿಲ್ಲೆಯಗುಂಡ್ಲುಪೇಟೆ ಪಟ್ಟಣ ಠಾಣೆ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ದೇಹಗಳನ್ನು ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.