Saturday, May 4, 2024
spot_imgspot_img
spot_imgspot_img

ಕಡಬದಲ್ಲಿ ಅಕ್ರಮ ಗೋಸಾಗಾಟದ ಕಾರು ಡಿಕ್ಕಿಯಾಗಿ ವ್ಯಕ್ತಿ ಮೃತ್ಯು : ಆರೋಪಿ ಬಂಧನಕ್ಕೆ ಒತ್ತಾಯಿಸಿ ರಾಜ್ಯ ರಸ್ತೆ ತಡೆದು ಹಿಂದೂ ಸಂಘಟನೆ ಕಾರ್ಯಕರ್ತರ ತಡರಾತ್ರಿ ಪ್ರತಿಭಟನೆ:

- Advertisement -G L Acharya panikkar
- Advertisement -

ಕಡಬ: ಉಪ್ಪಿನಂಗಡಿ ರಾಜ್ಯ ರಸ್ತೆಯ ಮರ್ದಾಳ ಜಂಕ್ಷನ್ ನಲ್ಲಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಮಾ.30 ರ ಸಂಜೆ ನಡೆದಿತ್ತು.ಈ ಅಪಘಾತದಲ್ಲಿ ನೆಕ್ಕಿತ್ತಡ್ಕದ ಅಚ್ಚಿಲ ಪಟ್ಟೆ ನಿವಾಸಿ ವಿಠಲ ರೈ ಎಂಬವರು ಮೃತಪಟ್ಟಿದ್ದರು.ಆದರೆ ಡಿಕ್ಕಿ ಹೊಡೆದ ಕಾರು ಚಾಲಕ ನಿಲ್ಲಿಸದೇ ಪರಾರಿಯಾಗಿದ್ದು, ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟತ್ತು.

ಪರಾರಿಯಾಗಿರುವ ಕಾರಿನ ಕುರಿತು ಸಾರ್ವಜನಿಕರು ಮಾಹಿತಿ ಕಲೆ ಹಾಕಿದ್ದು ಆ ಕಾರು ಮರ್ಧಾಳ ಸಮೀಪದ ಪನ್ಯದಲ್ಲಿರುವ ಮನೆಯಲ್ಲಿ ತಂದು ನಿಲ್ಲಿಸಲಾಗಿದೆ ಹಾಗೂ ಕಾರಿನಲ್ಲಿ 2 ದನಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದರು ಎಂಬ ಮಾಹಿತಿ ಲಭಿಸಿದೆ.

ಘಟನೆ ಕುರಿತು ಹಿಂದೂಪರ ಸಂಘಟನೆಯವರು ಕಡಬದ ರಾಜ್ಯ ರಸ್ತೆ ತಡೆದು ಪ್ರತಿಭಟನೆ ಮಾಡುತ್ತಿದ್ದು, ಸ್ಥಳಕ್ಕೆ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಆಗಮಿಸಿ ಆರೋಪಿಗಳನ್ನು ಬಂಧಿಸದೆ ಈ ಪ್ರತಿಭಟನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ಕೂಡಲೇ ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಕಾನೂನು ಪ್ರಕಾರ ಸೂಕ್ತ ಕ್ರಮ ಜರುಗಿಸುವಂತೆ ಪೊಲೀಸರಿಗೆ ಹೇಳಿದರು..

ಇನ್ನು ಪ್ರತಿಭಟನಾ ಸ್ಥಳಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕೂಡ ಆಗಮಿಸಿದ್ದಾರೆ. ಬಿಜೆಪಿಯ ಹಲವು ಮುಖಂಡರು, ಕಾರ್ಯಕರ್ತರು ಆಗಮಿಸಿ ತಡರಾತ್ರಿ ಪ್ರತಿಭಟನೆ ನಡೆಸಿದ್ದಾರೆ.

- Advertisement -

Related news

error: Content is protected !!