Friday, June 5, 2026
spot_imgspot_img
spot_imgspot_img

ಸುಳ್ಯ: ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಮೃತ್ಯು

- Advertisement -
- Advertisement -

ಸುಳ್ಯ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವರು ಕುಸಿದು ಬಿದ್ದು, ಸ್ಥಳದಲ್ಲೇ ಮೃತಪಟ್ಟ ಘಟನೆ ಸುಳ್ಯ, ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ಸಂಭವಿಸಿದೆ.

ಸಂಪಾಜೆ ಗ್ರಾಮದ ಎಡ್ವಾಣೆ ತಿಮ್ಮಪ್ಪ ಪೂಜಾರಿ (65) ತಮ್ಮ ಮನೆಗೆ ನಡೆದುಕೊಂಡು ಹೋಗುವ ದಾರಿಯ ಮದ್ಯೆ ಕುಸಿದು ಬಿದ್ದು ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ತಿಮ್ಮಪ್ಪ ಪೂಜಾರಿ ಅವರ ಮೃತದೇಹವನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮೃತರು ಪತ್ನಿ , ಇಬ್ಬರು ಪುತ್ರರನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

- Advertisement -

Related news

error: Content is protected !!