ರಾಜ್ಯ ಕಾಂಗ್ರೆಸ್ ಸರಕಾರದ "ಅಭಿವೃದ್ಧಿ ಶೂನ್ಯ ಆಡಳಿತ", ಜನವಿರೋಧಿ ಧೋರಣೆಗಳ ವಿರುದ್ದ ಪ್ರತಿಭಟನೆ



ವೀರಕಂಭ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದ್ದು, ಜನಸಾಮಾನ್ಯರು ಜೀವನ ಮಾಡಲು ಕಷ್ಟಕರವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅರ್ಹ ಫಲಾನುಭವಿಗಳ ಪಿಂಚಣಿಗಳು ಕೂಡ ರದ್ದಾಗಿದ್ದು, ತೀರ ಬಡವರು ಕೂಡ ಸೌಲಭ್ಯ ವಂಚಿತರಾಗಿದ್ದಾರೆ. ಆಶ್ರಯ ಯೋಜನೆಗಳು ಕೂಡ ಮಂಜೂರಾಗುತ್ತಿಲ್ಲ, ಮರಳು ಸಿಗುವುದು ದುಸ್ತರವಾಗಿದೆ. ಈ ಎಲ್ಲಾ ವಿಷಯಗಳ ಬಗ್ಗೆ ರಾಜ್ಯ ಬಿಜೆಪಿ ಜನಾಂದೋಲನ ಹಮ್ಮಿಕೊಂಡು ಬಿಜೆಪಿ ವೀರಕಂಭ ಶಕ್ತಿ ಕೇಂದ್ರದ ವತಿಯಿಂದ ಇಂದು (ನ.19)ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಗ್ರಾಮದ ಎರ್ಮೆಮಜಲ್ ಜಂಕ್ಷನ್ ಬಳಿಯಿಂದ ಪಾದಯಾತ್ರೆಯ ಮೂಲಕ ವೀರಕಂಭ ಪಂಚಾಯತ್ ಕಚೇರಿಗೆ ಆಗಮಿಸಿದ ಬೃಹತ್ ಪ್ರತಿಭಟನಾ ಜಾಥಾ, ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಬೆಲೆ ಏರಿಕೆ, ಪಿಂಚಣಿ ರದ್ದು ನಿರ್ಧಾರವನ್ನು ಖಂಡಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್, ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ಜಿಲ್ಲಾ ವಕ್ತಾರ ಮಾಧವ ಮಾವೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಪ್ಪ ಪೂಜಾರಿ, ಶಕ್ತಿ ಕೇಂದ್ರ ಪ್ರಭಾರಿ ರಾಮದಾಸ್ ಬಂಟ್ವಾಳ ಮಾತನಾಡಿದರು.
ಸಭೆಯಲ್ಲಿ ವೀರಕಂಭ ಶಕ್ತಿ ಕೇಂದ್ರ ಪ್ರಮುಖ್ ಜಯಪ್ರಸಾದ್, ಮಂಡಲ ಕಾರ್ಯದರ್ಶಿ ಸನತ್ ಕುಮಾರ್ ರೈ, ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಅರವಿಂದ್ ರೈ, ಪ್ರಧಾನ ಕಾರ್ಯದರ್ಶಿ ನಾಗೇಶ್ ಭಂಡಾರಿ, ರೈತ ಮೋರ್ಚಾ ಅಧ್ಯಕ್ಷರಾದ ಉಮೇಶ್ ಶೆಟ್ಟಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂಪತ್ ಕೋಟ್ಯಾನ್, ಪಕ್ಷದ ಹಿರಿಯರಾದ ಚಂದ್ರಶೇಖರ್ ಬಾಯಿಲ ಉಪಸ್ಥಿತರಿದ್ದರು.
ಇದೇ ವೇಳೆ ಒಬಿಸಿ ಉಪಾಧ್ಯಕ್ಷರಾದ ದಿನೇಶ್, ಯುವಮೋರ್ಚಾ ಉಪಾಧ್ಯಕ್ಷ ಸಂದೀಪ್ ಪೂಜಾರಿ, ಬಿಜೆಪಿ ಜಿಲ್ಲಾ ಪ್ರಮುಖ್ ದೇವಿಪ್ರಸಾದ್ ಬೆಂಜಂತಿಮಾರ್, ಮಾ ಮಹಾಶಕ್ತಿ ಕೇಂದ್ರ ಯುವಮೋರ್ಚಾ ಅಧ್ಯಕ್ಷರಾದ ಸಂದೇಶ್, ಸೊಸೈಟಿ ನಿರ್ದೇಶಕರಾದ ಕೊರಗಪ್ಪ ಗೌಡ, ಕೊರಗಪ್ಪ ನಾಯ್ಕ್, ನೋಣಯ್ಯ ಎಂ.ಆರ್., ವಿಶ್ವನಾಥ್ ಎಂ., ಪಕ್ಷದ ಪ್ರಮುಖರಾದ ಚಿದಾನಂದ ಕಲ್ಮಲೆ, ರಾಜೇಂದ್ರ ಟೈಲರ್, ಜಯಂತಿ, ವೀರಪ್ಪ ಮೂಲ್ಯ, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾದ ರವೀಂದ್ರ ಪಾದೆ, ವೇಣುಗೋಪಾಲ್, ಚಂದ್ರಶೇಖರ್ ಗೌಡ, ಯಾದವ ಸಾಲಿಯಾನ್, ಕಾರ್ಯದರ್ಶಿಗಳಾದ ದಿನೇಶ್ ಆಚಾರ್, ಪುಷ್ಪರಾಜ್ ರೈ, ಬಾಬಾಕಿರಣ್, ಪಂಚಾಯತ್ ಸದಸ್ಯರಾದ ಶ್ರೀಮತಿ ಜಯಂತಿ, ಶ್ರೀಮತಿ ಉಮಾವತಿ ಹಾಗೂ ಹಲವಾರು ಮಹಿಳಾ ಪ್ರಮುಖರು, ಬಿಜೆಪಿ ಕಾರ್ಯಕರ್ತರು ಹಾಗೂ ಪಿಂಚಣಿ ಸಂತ್ರಸ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಜಯಪ್ರಸಾದ್ ಶೆಟ್ಟಿ ಸ್ವಾಗತಿಸಿ, ಸಂದೀಪ್ ಧನ್ಯವಾದ ಅರ್ಪಿಸಿದರು.








