Sunday, May 5, 2024
spot_imgspot_img
spot_imgspot_img

ಬೇಲಿಗೆ ಬೆಂಕಿ ಹಚ್ಚಿ ತನ್ನಿಬ್ಬರು ಮಕ್ಕಳನ್ನು ತಳ್ಳಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

- Advertisement -G L Acharya panikkar
- Advertisement -

ತಾಯಿಯೊಬ್ಬಳು ಬೇಲಿಗೆ ಬೆಂಕಿ ಹಚ್ಚಿ ಮೊದಲು ತನ್ನಿಬ್ಬರು ಮಕ್ಕಳನ್ನು ತಳ್ಳಿ ಬಳಿಕ ತಾನು ಅದೇ ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಚಿತ್ರದುಗೌದ ಚಳ್ಳಕೆರೆ ತಾಲೂಕಿನ‌ ಮಲ್ಲಸಮುದ್ರ ಗ್ರಾಮದಲ್ಲಿ ನಡೆದಿದೆ.

ಮಲ್ಲಸಮುದ್ರ ಗ್ರಾಮದ ನಿವಾಸಿಯಾದ ತಾಯಿ ಮಾರಕ್ಕ (24) ಹಾಗೂ ಮಕ್ಕಳಾದ ನಯನ್ (4) ಹರ್ಷವರ್ಧನ್ (2) ಮೃತ ದುರ್ದೈವಿಗಳು.

ಮಧ್ಯಾಹ್ನ ಗಂಟೆ 12ರ ಸಂದರ್ಭದಲ್ಲಿ ಗ್ರಾಮದ ಹೊರವಲಯದಲ್ಲಿದ್ದ ಬೇಲಿಯೊಂದಕ್ಕೆ ತಾಯಿ ಮೊದಲು ಬೆಂಕಿ ಹಚ್ಚಿದ್ದಾಳೆ. ಬಳಿಕ ಮೊದಲು ತನ್ನಿಬ್ಬರು ಮಕ್ಕಳನ್ನು ತಳ್ಳಿದ್ದಾಳೆ. ನಂತರ ತಾನು ಕೂಡ ಅದೇ ಬೆಂಕಿಗೆ ಹಾರಿದ್ದು, ಮಕ್ಕಳಿಬ್ಬರು ಸ್ಥಳದಲ್ಲೇ ಅಸು ನೀಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ತಾಯಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಅಸು ನೀಗಿದ್ದಾಳೆ.

ತಾಯಿ, ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕಾರಣ ಏನು ಎಂಬುದು ಇನ್ನು ತಿಳಿದು ಬಂದಿಲ್ಲ. ಸದ್ಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿರುವ ತಳಕು ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪೊಲೀಸರ ತನಿಖೆ ನಂತರವೇ ಆತ್ಮಹತ್ಯೆಗೆ ಮೂಲ ಕಾರಣ ತಿಳಿದು ಬರಲಿದೆ.

- Advertisement -

Related news

error: Content is protected !!