Sunday, June 7, 2026
spot_imgspot_img
spot_imgspot_img

ಬಂಟ್ವಾಳ: ರೈಲು ಡಿಕ್ಕಿಯಾಗಿ ವ್ಯಕ್ತಿ ಮೃತ್ಯು

- Advertisement -
- Advertisement -

ಬಂಟ್ವಾಳ: ರೈಲು ಡಿಕ್ಕಿಯಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಬಿಸಿರೋಡಿನ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ.

ಬಂಟ್ವಾಳ ‌ಕಾಮಾಜೆ ನಿವಾಸಿ ಕರುಣಾಕರ (35) ಸಾವನ್ನಪ್ಪಿದ ವ್ಯಕ್ತಿ.

ಮರದ ಕೆಲಸ ಮಾಡುತ್ತಿದ್ದ ಕರುಣಾಕರ ಅವರು ಕಳೆದ ಎರಡು ವರ್ಷಗಳ ‌ಹಿಂದೆಯಷ್ಟೇ ಮದುವೆಯಾಗಿದ್ದು, ಒಂದು ವರ್ಷದ ಹೆಣ್ಣುಮಗುವಿದೆ ಎಂದು ತಿಳಿದುಬಂದಿದೆ. ಸುಮಾರು 11 ಗಂಟೆಯ ವೇಳೆ ಆಗಮಿಸಿದ ರೈಲು ಡಿಕ್ಕಿಯಾಗಿದ್ದು, ಬಿಸಿರೋಡಿನ ರೈಲು ನಿಲ್ದಾಣ ಸಮೀಪದಲ್ಲಿ ಕುತ್ತಿಗೆ ಹಾಗೂ ದೇಹ ಎರಡು ಮಾರ್ಪಾಡು ಆಗಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಕಾಮಾಜೆಯಿಂದ ಬಿಸಿರೋಡಿಗೆ ಮತ್ತು ಕೆಲಸಕ್ಕೆ ಹೋಗುವ ವೇಳೆ ಇದೇ ರೈಲ್ವೆ ಹಳಿಯ ಬದಿಯಲ್ಲಿ ನಡೆದುಕೊಂಡೇ ಕರುಣಾಕರ ಹೋಗುತ್ತಿದ್ದರು ಎಂಬ ವಿಚಾರವನ್ನು ಈತನ‌ ಕುಟುಂಬಿಕರು ತಿಳಿಸಿದ್ದಾರೆ.

ಸ್ಥಳಕ್ಕೆ ಬಂಟ್ವಾಳ ‌ನಗರ ಠಾಣಾ ಪೊಲೀಸರು ಹಾಗೂ ರೈಲ್ವೆ ಇಲಾಖೆಯ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!