Thursday, April 25, 2024
spot_imgspot_img
spot_imgspot_img

ಅತ್ತೂರ್ ಕೃಷ್ಣಗಿರಿ ಪರ್ಪಲೆ ಗುಡ್ಡೆ(ಕಲ್ಕುಡ ಗುಡ್ಡೆ)ಯಲ್ಲಿ ಡಿಜಿಟಲ್ ಸರ್ವೇ ಕಾರ್ಯಕ್ಕೆ “ಹಿಂದೂ ಜಾಗರಣ ವೇದಿಕೆ”ಯ ಮುಖಂಡರ ಉಪಸ್ಥಿತಿಯಲ್ಲಿ ಅಧಿಕೃತ ಚಾಲನೆ

- Advertisement -G L Acharya panikkar
- Advertisement -

ಉಡುಪಿ: ವಿಶ್ವದಾದ್ಯಂತ ಇರುವ ಹಿಂದೂಗಳ ಅಸ್ಮಿತೆಯ ಪ್ರತೀಕನಾದ ಅಯೋಧ್ಯಾಪತಿ ಪ್ರಭು ಶ್ರೀ ರಾಮಚಂದ್ರನ ಮಂದಿರಕ್ಕಾಗಿ ದೇಶದಲ್ಲಿ ಶತ-ಶತಕಗಳಿಂದ ನಡೆದಿರುವ ಅಯೋಧ್ಯೆ ಹೋರಾಟದಂತೆಯೇ….
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅತ್ತೂರ್ ಕೃಷ್ಣಗಿರಿ ಪರ್ಪಲೆಗುಡ್ಡೆ(ಕಲ್ಕುಡ ಗುಡ್ಡೆ)ಯಲ್ಲಿ ಅನ್ಯ ಮತೀಯ ರಿಂದ ದ್ವಂಸಗೊಳಗಾಗಿರುವ, ಜಗತ್ತಿನಾದ್ಯಂತ ಇರುವ ಕರಾವಳಿಗರ ಆರಾಧ್ಯ ದೈವ ಕಾರಣೀಕ ಮೂರ್ತಿ ಕಲ್ಕುಡ ದೈವಸ್ಥಾನದ ಪುನರ್ ನಿರ್ಮಾಣದ (ಜೀರ್ಣೋಧ್ದಾರದ) ಹೋರಾಟವನ್ನು ಉಡುಪಿ ಜಿಲ್ಲಾ ಹಿಂದು ಜಾಗರಣ ವೇದಿಕೆ ಯು ಯಾವುದೇ ಪ್ರಚಾರವಿಲ್ಲದೆ ಕೈಗೊಂಡಿದೆ.

ಆ ಹೋರಾಟದ ಮುಂದುವರಿದ ಭಾಗವೆಂಬಂತೆ ಇವತ್ತು ತಾರೀಖು 05/10/2020 ಸೋಮವಾರದ ದಿನ ಕಾರ್ಕಳ ತಾಲೂಕ್ ಸರ್ವೇಯರ್ ಮತ್ತು ವಿಲೇಜ್ ಅಕೌಂಟೆಟ್ಗಳ ತಂಡವು ಹಿಂದೂ ಜಾಗರಣ ವೇದಿಕೆಯ ಜಿಲ್ಲಾ,ತಾಲೂಕ್ ಮತ್ತು ನಗರ ಮುಖಂಡರ ಉಪಸ್ಥಿತಿಯಲ್ಲಿ ಡಿಜಿಟಲ್ ಸರ್ವೇಕಾರ್ಯಕ್ಕೆ ಚಾಲನೆ ನೀಡಿದೆ. ಈ ಮೂಲಕ ಕಾರ್ಕಳ ತಾಲೂಕಿನ ಹಿಂದೂಗಳ ಬಹು ದಶಕದ ಧಾರ್ಮಿಕ ಹೋರಾಟಕ್ಕೆ ಮೂರನೇ ಹಂತದ ಜಯ ಸಿಕ್ಕಿದೆ.

ಮೊನ್ನೆಯಷ್ಟೆ ಪ್ರಾಯೋಗಿಕವಾಗಿ ಡಿಜಿಟಲ್ ಸರ್ವೇ ಪರೀಕ್ಷಾ ಕಾರ್ಯ ನಡೆದಿದ್ದು, ಇಂದು ಅದಕ್ಕೆ ಅಧಿಕೃತವಾದ ಚಾಲನೆ ದೊರಕಿದೆ. ಕೃಷ್ಣಗಿರಿ ಪರ್ಪಲೆ ಗುಡ್ಡೆಯಲ್ಲಿದ್ದ ಗಡಿಕಲ್ಲನ್ನು ಅಕ್ರಮ ಭೂ ಒತ್ತುವರಿಗಾರರು ನಾಶಪಡಿಸಿದ್ದ ಕಾರಣ ನೂರಾರು ಎಕರೆ ಸರಕಾರಿ ಕಂದಾಯ/ಅರಣ್ಯ ಭೂಮಿ ಒತ್ತುವರಿ ಆಗಿರುವ ಕಡೆ ಸರ್ವೇ ಕಾರ್ಯಕ್ಕೆ ತೊಡಕಾಗಿತ್ತು ಆ ಕಾರಣ ಕಾರ್ಕಳದ ಹಿಂದೂ ಜಾಗರಣ ವೇದಿಕೆ ಯು ಈ ಅಕ್ರಮದ ವಿರುದ್ದ ನ್ಯಾಯಾಲಯದ ಮೊರೆ ಹೋಗಿತ್ತು ಮತ್ತು ಕಾರ್ಕಳದ ಶಾಸಕರಾದ ಮಾನ್ಯ ಶ್ರೀ ಸುನೀಲ್ ಕುಮಾರ್ ರವರಲ್ಲಿ ಅತ್ತೂರ್ ಕೃಷ್ಣಗಿರಿ ಪರ್ಪಲೆ ಗುಡ್ಡೆ(ಕಲ್ಕುಡ ಗುಡ್ಡೆ)ಯಲ್ಲಿ ಡಿಜಿಟಲ್ ಸರ್ವೇ ಕಾರ್ಯಕ್ಕೆ ಒತ್ತಾಯಿಸಿತ್ತು.


ಅದರ ಫಲಶ್ರುತಿಯಂತೆ ಡಿಜಿಟಲ್ ಸರ್ವೇ ತಂಡ ಮೊನ್ನೆ ತಮ್ಮ ಡಿಜಿಟಲ್ ಉಪಕರಣಗಳ ಪ್ರಾಯೋಗಿಕ ಪರೀಕ್ಷೆಯನ್ನು ಅತ್ತೂರ್ ಚರ್ಚ್ ಪರಿಸರದಲ್ಲಿ ಮಾಡಿದ ನಂತರ ಇವತ್ತು ಅಧಿಕೃತವಾಗಿ ಡಿಜಿಟಲ್ ಸರ್ವೇ ಕಾರ್ಯ ಅತ್ತೂರ್ ಚರ್ಚ್ ಪರಿಸರದಲ್ಲಿ ಮಾಡಿತು.


ಈ ಡಿಜಿಟಲ್ ಸರ್ವೇಯಲ್ಲಿ ಬಂದ ವರದಿ ಮತ್ತು ಇದಕ್ಕೆ ಮೊದಲು ನಡೆದ ಎರಡು ಬಾರಿಯ ಸರ್ವೇಯ ವರದಿಯಲ್ಲಿ ಏನಾದರೂ ಲೋಪ ಬಂದರೆ ಮಗದೊಮ್ಮೆ ಡಿಜಿಟಲ್ ಸರ್ವೇ ಕಾರ್ಯ ಹಿಂದೂ ಜಾಗರಣ ವೇದಿಕೆಯ ಮುಖಂಡರ ನೇತೃತ್ವದಲ್ಲಿ ನಡೆಯಲಿದೆ ಎಂದು ಹಿಂದೂ ಜಾಗರಣಾ ವೇದಿಕೆ ಕಾರ್ಕಳ ತಾಲೂಕು ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -

Related news

error: Content is protected !!