Sunday, May 5, 2024
spot_imgspot_img
spot_imgspot_img

ಮನೆ‌ ಮುಂದೆ ಆಟವಾಡುತ್ತಿದ್ದ ಮಗು ಮೇಲೆ ಹರಿದ ಶಾಲಾ ಬಸ್; ಸ್ಥಳದಲ್ಲೇ ಮೃತ್ಯು..!

- Advertisement -G L Acharya panikkar
- Advertisement -

ಮನೆ‌ ಮುಂದೆ ಆಟವಾಡುತ್ತಿದ್ದ ಮಗು ಮೇಲೆ ಶಾಲಾ ಬಸ್ ಹರಿದು ಬಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಕಲಬುರಗಿ ನಗರದ ಸಂಗಮೇಶ್ವರ ಕಾಲೋನಿಯಲ್ಲಿ ನಡೆದಿದೆ

ಮೃತಪಟ್ಟ ಬಾಲಕ ಮನೋಜ್ (2) ಎಂದು ಗುರುತಿಸಲಾಗಿದೆ.

ಮನೆ‌ ಮುಂದೆ ಮಗುವಿನ ಮೇಲೆ ಚಾಲಕ ಬಸ್​​ ಹರಿಸಿದ್ದಾರೆ. ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಘಟನೆ ಬಳಿಕ ವಾಹನ ಬಿಟ್ಟು ಶಾಲಾ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಇನ್ನೂ ಮಗುವನ್ನು ಕಳೆದುಕೊಂಡ ದುಃಖದಲ್ಲಿ ಕುಟುಂಬಸ್ಥರು ಬಸ್ಸಿನ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ. ಪರಿಣಾಮ ಬಸ್ಸಿನ ಗಾಜು ಪುಡಿ ಪುಡಿಯಾಗಿದೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬಳಿಕ ಶಾಲಾ ವಾಹನವನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ವಶಪಡಿಸಿಕೊಂಡ ಬಸ್​​ ನ್ಯಾಶನಲ್ ಪಬ್ಲಿಕ್ ಶಾಲೆಗೆ ಸೇರಿದೆ.

- Advertisement -

Related news

error: Content is protected !!