Tuesday, April 30, 2024
spot_imgspot_img
spot_imgspot_img

ಲೈವ್ ಮಾಡುವಾಗಲೇ ಶಿವಸೇನಾ ಮುಖಂಡನಿಗೆ ಗುಂಡು ಹಾರಿಸಿ ಹತ್ಯೆ

- Advertisement -G L Acharya panikkar
- Advertisement -

ಫೇಸ್​ಬುಕ್​ ಲೈವ್ ಮಾಡುತ್ತಿದ್ದ ​ವೇಳೆ ಫೈರಿಂಗ್​ ಮಾಡಿರೋ ಘಟನೆ ಮಹಾರಾಷ್ಟ್ರದ ದಹಿಸರ್ ಪ್ರದೇಶದಲ್ಲಿ ನಡೆದಿದೆ.

ಅಭಿಷೇಕ್ ಘೋಸಲ್ಕರ್​ ಮೃತ ದುರ್ದೈವಿ.

ಶಿವಸೇನೆ ಯುಬಿಟಿ ಮುಖಂಡ​ ಅಭಿಷೇಕ್ ಫೇಸ್​ಬುಕ್​ ಲೈವ್​ನಲ್ಲಿ ಮಾತಾಡುತ್ತಿದ್ದರು. ಇದೇ ವೇಳೆ ಲೈವ್​ನಲ್ಲಿ ಕುಳಿತಿದ್ದ ಮೋರಿಸ್​ ಭಾಯ್ ಎಂಬಾತ ಈ ಫೈರಿಂಗ್ ಮಾಡಿದ್ದಾನೆ. ಮೊದಲು ಲೈವ್​ ಮುಗಿಸಿಕೊಂಡು ಎದ್ದೇಳುತ್ತಿದ್ದ ಅಭಿಷೇಕ್​ ಎದೆಯ ಭಾಗಕ್ಕೆ ಗುಂಡು ಹಾರಿಸಿದ್ದಾನೆ. ಬಳಿಕ ಮತ್ತೆರೆಡು ಗುಂಡು ಹಾರಿಸಿದ್ದಾನೆ. ಬಳಿಕ ಅಭಿಷೇಕ್​ಗೆ ಸಾವನ್ನಪ್ಪಿದ ಬಳಿಕ ತಾನೂ ಗುಂಡು ಹಾರಿಸಿಕೊಂಡ ಸಾವಿಗೆ ಶರಣಾಗಿದ್ದಾನೆ.

ಮೃತ ಅಭಿಷೇಕ್ ಅವರು ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಮಾಜಿ ಕೌನ್ಸಿಲರ್ ವಿನೋದ್ ಘೋಸಲ್ಕರ್ ಅವರ ಪುತ್ರರಾಗಿದ್ದಾರೆ. ಮುಂಬೈನ ದಹಿಸರ್ ಪ್ರದೇಶದ ಎಂಎಚ್‌ಬಿ ಕಾಲೋನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- Advertisement -

Related news

error: Content is protected !!